ನಿಂತಿದ್ದ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ; ಇಬ್ಬರು ಸವಾರರು ಸ್ಥಳದಲ್ಲೇ ಸಾವು

ಟ್ರಕ್ ನಿಲ್ಲಿಸಿಕೊಂಡು ಅಡುಗೆ ಮಾಡುತ್ತಿದ್ದ ಚಾಲಕ, ಕ್ಲೀನರ್

ಹಾಸನ: ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಟೋಲ್ ಬಳಿ ನಡೆದಿದೆ.

ಕ್ಯಾಸ್ಟ್ರಾಲ್ ಕಂಪೆನಿ ನೌಕರ ಅರಕಲಗೂಡು ತಾಲ್ಲೂಕಿನ, ಚಿಕ್ಕ ಆಲದಹಳ್ಳಿ ಗ್ರಾಮದ ಆಶ್ವತ್ಥ್ (42), ಹಾಗೂ ಆಲದಹಳ್ಳಿ ಗ್ರಾಮದ ಸಾಗರ್ (42) ಮೃತ ದುರ್ದೈವಿಗಳು.

ಟ್ರಕ್ ಚಾಲಕ ಹಾಗೂ ನಿರ್ವಾಹಕ ಶಾಂತಿಗ್ರಾಮ ಟೋಲ್ ಬಳಿ ರಸ್ತೆ ಬದಿ ಟ್ರಕ್ ನಿಲ್ಲಿಸಿಕೊಂಡು ಅಡುಗೆ ಮಾಡುತ್ತಿದ್ದರು.

ಚನ್ನರಾಯಪಟ್ಟಣದ ಕಡೆಯಿಂದ ಹಾಸನದ ಕಡೆಗೆ ಬರುತ್ತಿದ್ದ ಬೈಕ್ ಸವಾರರು ವೇಗವಾಗಿ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ KA-13-U-2028 ನಂಬರ್‌ನ ಬೈಕ್ ಲಾರಿಯ ಚಾರ್ಸಿ ಗಾರ್ಡ್ ಮುರಿದು ಒಳ ನುಗ್ಗಿದೆ. ತೀವ್ರವಾಗಿ ಗಾಯಗೊಂಡ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಕಮಲಸಾವಿಗೀಡಾಗಿದ್ದಾರೆ. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.