ಮನೆ ಮೇಲೆ ದಾಳಿ ನಡೆಸಿ ಛಾವಣಿ ಕೆಡವಿದ ಕಾಡಾನೆ; ಯಡಕುಮರಿ ಜನರು ಭಯಭೀತ

ಇಪ್ಪತ್ತು ದಿನಗಳಿಂದ ಮನೆ ಬಳಿ ಬೀಡು ಬಿಟ್ಟ ಒಂಟಿ ಸಲಗ

ಹಾಸನ: ಕೃಷಿಕರೊಬ್ಬರ ಮನೆಯ ಮೇಲೆ ಒಂಟಿಸಲಗ ದಾಳಿ ನಡೆಸಿದ್ದು, ಮನೆಯ ಕಡಿಯಾರಿನ ಛಾವಣಿ ಶೀಟ್ ಧ್ವಂಸಗೊಳಿಸಿ ಹೆಂಚುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಯಡಕುಮರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೆಂಕಟೇಶ್ ಅವರ ಮನೆ ಮೇಲೆ ಕಾಡಾನೆ
ದಾಳಿ ಮಾಡಿದ್ದು, ಇದರಿಂದ ಅವರ ಕುಟುಂಬ ಭಯಭೀತವಾಗಿದೆ. 20 ದಿನಗಳಿಂದ ಅವರ ಮನೆ‌ ಬಳಿಯೇ ಬೀಡುಬಿಟ್ಟಿರುವ ಪುಂಡಾನೆ ಇಂದು ಏಕಾಏಕಿ ಮನೆ ಮೇಲೆ ದಾಳಿ ಮಾಡಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಆನೆಯನ್ನು ದೂರದ ಕಾಡಿಗೆ ಅಟ್ಟಬೇಕು. ಆನೆ ದಾಳಿಯಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.