ಹೆಂಡತಿ ಜತೆಗಿನ ಜಗಳದಿಂದ ಬೇಸತ್ತು ಕುತ್ತಿಗೆ ಕೊಯ್ದುಕೊಂಡ ಪತಿ ಸಾವು

ಹಾಸನ: ಪತ್ನಿಯೊಂದಿಗಿನ ಜಗಳದಿಂದ ಬೇಸತ್ತ ಪತಿ‌ ಕತ್ತಿಯಿಂದ ತನ್ನ ಕತ್ತು ತಾನೇ ಕೊಯ್ದಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ತಾಲ್ಲೂಕಿನ, ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.

ಚೌಡಭೋವಿ (55) ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಆತ
ನಿನ್ನೆ ರಾತ್ರಿಯೂ ಮದ್ಯ ಸೇವಿಸಿ ಬಂದು ಪತ್ನಿಯೊಂದಿಗೆ ಜಗಳವಾಡಿದ್ದ. ಅದು ಅತಿರೇಕಕ್ಕೆ ಹೋದಾಗ ಮದ್ಯದ ಮತ್ತಿನಲ್ಲಿದ್ದ ಆತ ಬೇಸತ್ತು ಹಾಸಿಗೆಯಲ್ಲಿ ಮಲಗಿ ಕತ್ತಿಯಿಂದ ತನ್ನ ಕುತ್ತಿಗೆ ತಾನೇ ಕೊಯ್ದುಕೊಂಡಿದ್ದಾನೆ.

ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.