ಹಾಸನ: ಅಡುಗೆ ಮನೆಯಲ್ಲಿ ಎಲ್ಪಿಜಿ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ದಂಪತಿ ಗಾಯಗೊಂಡು ಮನೆ ಜಖಂಗೊಂಡ ಘಟನೆ ಇಂದು ಬೆಳಗ್ಗೆ ಹಾಸನ ತಾಲ್ಲೂಕಿನ ಕಬ್ಬತ್ತಿ ಗ್ರಾಮದಲ್ಲಿ ನಡೆದಿದೆ.
ರಘು-ಭವ್ಯ ಗಾಯಗೊಂಡ ದಂಪತಿ ಇಬ್ಬರನ್ನೂ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗ್ಯಾಸ್ ಸಿಲಿಂಡರ್ ಸ್ಪೋಟಗೊಳ್ಳುವ ಮುನ್ನವೇ ಮಕ್ಕಳು ಶಾಲೆಗೆ ತೆರಳಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.
ಗ್ಯಾಸ್ ಸಿಲಿಂಡರ್ ಸ್ಪೋಟ ರಭಸಕ್ಕೆ ಮನೆಯ ಹೆಂಚುಗಳು ಹಾರಿ ಹೋಗಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.
ಹಲವಾರು ಬಾರಿ ಕರೆ ಮಾಡಿದರೂ ಅಗ್ನಿಶಾಮಕ ದಳದ ಕಚೇರಿಗೆ ದೂರವಾಣಿ ಸಂಪರ್ಕ ಸಾಧ್ಯವಾಗದ್ದರಿಂದ ಸ್ಥಳೀಯರು ಮೂರು ನಲ್ಲಿಯಲ್ಲಿ ನೀರು ಬಿಟ್ಟು ಪೈಪ್ ಬಳಸಿ ಬೆಂಕಿ ನಂದಿಸಿದ್ದಾರೆ.