ಮೂವತ್ತು ವರ್ಷಗಳಿಂದ ನಡೆಯದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ; ಷೇರುದಾರರಿಂದ ಹಾಲಿನ ಕ್ಯಾನ್‌ಗಳಿಟ್ಟು ಪ್ರತಿಭಟನೆ. ಶಾಸಕ ಸಿ.ಎನ್.ಬಾಲಕೃಷ್ಣ ವಿರುದ್ಧ ಆಕ್ರೋಶ.

ಷೇರುದಾರರ ಆಕ್ರೋಶ, ಹುಟ್ಟೂರಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕಾಗಿ ನಿಯಮ ಮೂಲೆಗುಂಪು ಮಾಡಿದರಾ ಬಾಲಕೃಷ್ಣ?

ಹಾಸನ: ಮೂವತ್ತು ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆದಿಲ್ಲ ಎಂದು ಆರೋಪಿಸಿ ಸಂಘದ ಷೇರುದಾರರು ಹಾಲಿನ ಕ್ಯಾನ್‌ಗಳಿಟ್ಟು ಪ್ರತಿಭಟನೆ ನಡೆಸಿದ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಎ.ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ ಮೂವತ್ತು ವರ್ಷಗಳಿಂದ ಶಾಸಕ ಸಿ.ಎನ್.ಬಾಲಕೃಷ್ಣ ಅಧಿಕಾರ ದುರುಪಯೋಗಪಡಿಸಿಕೊಂಡು ಕಳೆದ ಮೂವತ್ತು ವರ್ಷಗಳಿಂದ ಎ.ಚೋಳೆನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದು ಸಂಘದ ಷೇರುದಾರರು ಒಮ್ಮೆಯೂ ಮತದಾನ ಮಾಡಿಲ್ಲ ಎಂದು ಆರೋಪಿದರು. ಒಬ್ಬ ಷೇರುದಾರರಿಗೂ ಮಾಹಿತಿ ನೀಡದೆ ಚುನಾವಣೆ ನಡೆಸಿದ್ದಾರೆ.

ಸಹಕಾರ ಇಲಾಖೆಯ ದಾಖಲಾತಿಗಳಲ್ಲಿ ಚುನಾವಣೆ ನಡೆದಿದೆ ಎಂದು ನಮೂದಿಸಲಾಗಿದೆ. ಶಾಸಕ ಸಿ.ಎನ್.ಬಾಲಕೃಷ್ಣ ಸಹಕಾರ ಇಲಾಖೆ ಅಧಿಕಾರಿಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಚುನಾವಣೆ ಮಾಡಿದ್ದಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ನೂರಾರು ಮಂದಿ ಷೇರುದಾರರಿಂದ ಎ.ಚೋಳೆನಹಳ್ಳಿ ಗ್ರಾಮದ ಸಂಘದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕೂಡಲೇ ಚುನಾವಣೆ ನಡೆಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.