ಕಾಫಿ ತೋಟಕ್ಕೆ ಬಂದ ಹಸುಗಳನ್ನು ಗುಂಡಿಕ್ಕಿ ಕೊಂದ ದುರುಳರು

ಎರಡು ದಿನಗಳಿಂದ ಕಾಣೆಯಾಗಿದ್ದ ಗಬ್ಬದ ಹಸುಗಳು ಶವವಾಗಿ ಪತ್ತೆ

ಹಾಸನ: ದುಷ್ಕರ್ಮಿಗಳು ಎರಡು ಹಸುಗಳಿಗೆ ಗುಂಡಿಕ್ಕಿ ಕೊಂದಿರುವ ಘಟನೆ ಬೇಲೂರು ತಾಲ್ಲೂಕಿನ, ಹಿರೇಹಸಡೆ ಗ್ರಾಮದಲ್ಲಿ ನಡೆದಿದೆ.

ವಸಂತ್‌‌ಕುಮಾರ್, ಶಿವಮ್ಮ ಎಂಬುವವರಿಗೆ ಸೇರಿದ ಹಸುಗಳು ಎರಡು ದಿನಗಳಿಂದ ಕಾಣೆಯಾಗಿದ್ದವು. ಗೋವುಗಳಿಗಾಗಿ ಹುಡುಕಾಡಿದ್ದ ದಂಪತಿಗೆ ಹಸುಗಳು ದೊರಕಿರಲಿಲ್ಲ.

ಇಂದು ಐಬಿಸಿ ಎಸ್ಟೇಟ್‌ನಲ್ಲಿ ಗೋವುಗಳ ಮೃತದೇಹ ಪತ್ತೆಯಾಗಿದ್ದು ಎರಡೂ ಗಬ್ಬದ ಹಸುಗಳನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.