ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳ ದುರ್ಮರಣ

ಹಾಸನ: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಧಾರುಣ ಸಾವಿಗೀಡಾದ ಘಟ‌ನೆ ಬೇಲೂರು ತಾಲ್ಲೂಕಿನ, ನರಸೀಪುರ ಗ್ರಾಮದಲ್ಲಿ ನಡೆದಿದೆ.

ದೀಕ್ಷಿತ್ (10), ನಿತ್ಯಶ್ರೀ (12) ಕುಸುಮ (6) ಮೃತ ದುರ್ದೈವಿಗಳು.

ಜಾನುವಾರುಗಳನ್ನು ಕೆರೆಯ ಬಳಿ ಕಟ್ಟಿ ಆಡವಾಡುತ್ತಿದ್ದ ಮೂರು ಮಕ್ಕಳಲ್ಲಿ ಒಬ್ಬ ಬಾಲಕಿ ಆಕಸ್ಮಿಕವಾಗಿ ಮುಳುಗಿದ್ದು ಆಕೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಮಿಕ್ಕಿಬ್ಬರೂ ಮುಳುಗಿದ್ದಾರೆ.

ಸ್ಥಳೀಯರು ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ.
ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.