ಪತ್ನಿ ಕೊಂ*ದು ನೇ*ಣಿಗೆ ಶರಣಾದನೇ ಪತಿ? ಹಾಸನದಲ್ಲಿ ದಂಪತಿ ಅನುಮಾನಾಸ್ಪದ ಸಾವು

ಹಾಸನ : ಬಾಡಿಗೆ ಮನೆಯಲ್ಲಿ ದಂಪತಿ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ ಕೆ.ಹೊಸಕೊಪ್ಪಲಿನಲ್ಲಿ ನಡೆದಿದೆ. ಪತಿಯೇ ತನ್ನ ಪತ್ನಿಯನ್ನು ಕೊಂದು  ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ದೇವರಾಜು (43), ಮಂಜುಳಾ 35) ಮೃತ ದಂಪತಿ ಗಳಾಗಿದ್ದು  ಹೊಳೆನರಸೀಪುರ ತಾಲ್ಲೂಕು ಮೂಲದವರು ಎಂದು ತಿಳಿದು ಬಂದಿದೆ.

ಕಳೆದ ಮೂರು ತಿಂಗಳಿನಿಂದ ಕೆ.ಹೊಸಕೊಪ್ಪಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ವಾಸವಿದ್ದ ಇವರು ಕಳೆದ ಸೋಮವಾರದಿಂದ ಮನೆಯಿಂದ ಹೊರ ಬಂದಿರಲಿಲ್ಲ. ಒಇಂದು ಮನೆಯಿಂದ ದುರ್ವಾಸನೆ ಬಂದಾಗ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಈ ವೇಳೆ ಪೊಲೀಸರು ಬೀಗ ಒಡೆದು ಮನೆಯ ಒಳಗೆ ಪ್ರವೇಶಿಸಿದಾಗ ನೇಣುಬಿಗಿದುಕೊಂಡ ಸ್ಥಿತಿಯಲ್ಲಿರುವ ದೇವರಾಜು ಶವ ಹಾಗೂ ಮಂಚದ ಮೇಲೆ ಮಂಜುಳಾ ಮೃತದೇಹ ಕಂಡು ಬಂದಿದೆ.

ಹೊಳೆನರಸೀಪುರ ತಾಲ್ಲೂಕಿನ, ಕೆರಗೋಡು ಗ್ರಾಮದ ದೇವರಾಜ್ ಹೊಳೆನರಸೀಪುರ ತಾಲ್ಲೂಕಿನ, ಗೋಪನಹಳ್ಳಿ ಗ್ರಾಮದ ಮಂಜುಳಾ ಕಳೆದ ಹದಿನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸೋಮವಾರವೇ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು ಕೊಳೆತಿರುವ ಇಬ್ಬರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ

ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.