ಜ.31ರಿಂದ ಮಾಚಭೂವನಹಳ್ಳಿ ಮುದ್ದು ಮಾರುತಿ ದೇಗುಲ ಲೋಕಾರ್ಪಣೆ ಸಮಾರಂಭ

ಚನ್ನರಾಯಪಟ್ಟಣ: ತಾಲೂಕಿನ ಮಾಚಭೂವನಹಳ್ಳಿ (ಕಾವಲುಬಾರೆ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮುದ್ದು ಮಾರುತಿ ದೇಗುಲದ ಲೋಕಾರ್ಪಣೆ ಕಾರ್ಯವು ಜ.31 ರಿಂದ ಫೆ.2 ರವರೆಗೆ ಮೂರು ದಿನಗಳ ಕಾಲ ಸಾಂಪ್ರದಾಯಿಕ ಹಾಗೂ ವಿಜೃಂಭಣೆಯಿಂದ ನಡೆಯಲಿದೆ.

ಶ್ರೀ ಮುದ್ದು ಮಾರುತಿ ಸ್ವಾಮಿಯವರ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ.

ಜ.31 ನೇ ಶುಕ್ರವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ, ದೀಪಪೂಜೆ, ಭಗವತ್ ಅನೂಘ್ನೆ, ಸ್ವಸ್ತಿ ಪುಣ್ಯಹ ವಾಚನ, ರಕ್ಷಾಬಂಧನ, ಗಣಪತಿ ಪೂಜೆ, ಮಹಾಸಂಕಲ್ಪ, ವಾಸುದೇವ, ದ್ವಜಾರೋಹಣ, ವಾಸ್ತು ಪೂಜೆ, ಮಂಡಲಾರಾಧನೆ, ಗಣಪತಿ ಹೋಮ, ವಾಸ್ತು ಹೋಮ, ಸುದರ್ಶನ ಹೋಮ, ರಾಕ್ಷೋಘ್ನ ಹೋಮ, ಕ್ಷೇತ್ರಪಾಲಕ ಹೋಮ, ಲಘು ಪೂರ್ಣಾವತಿ, ಶಯ್ಯಾಧಿವಾಸ ಮತ್ತು ಮಹಾಮಂಗಳಾರತಿ ಜರುಗಲಿದೆ.

ಫೆ.1 ಶನಿವಾರ ಬೆಳಗ್ಗೆ ಸುಪ್ರಭಾತ, ವೇದ ಪಾರಾಯಣ, ದ್ವಾರ ತೋರಣ ಪೂಜೆ, ಯಾಗ ಶಾಲಾಪ್ರವೇಶ, ಅಂಕುರಾರ್ಪಣೆ, ಪ್ರಧಾನ ಕಳಶರಾಧನೆ, 108 ಕಲಶ ಆರಾಧನೆ, ಅಗ್ನಿ ಪ್ರತಿಷ್ಠೆ, ಪಂಚಸೂಕ್ತ ಹೋಮ, ಬ್ರಾಹ್ಮಿ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪನೆ, ಅಷ್ಟಬಂಧನ, ಪ್ರತಿಷ್ಠೆ, ನಯನೋನ್ಮಿಲನ ಹೋಮ, ಮೂರ್ತಿ ಹೋಮ, ಪ್ರಾಣ ಪ್ರತಿಷ್ಠಾಪನೆ ಹೋಮ, ಪ್ರಧಾನ ಶ್ರೀ ಮುದ್ದು ಮಾರುತಿ ಮೂಲದೇವ ಹೋಮ, ಶ್ರೀ ರಾಮತಾರಕ ಹೋಮ, ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ಮಹಾ ಪೂರ್ಣಾಹುತಿ, ಗ್ರಾಮ ಪ್ರದಕ್ಷಿಣೆ ಹಾಗೂ ಅಭಿಜಿತ್ ಮುಹೂರ್ತದಲ್ಲಿ ಮಹಾಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪಲಂಕಾರ, ಗೋದರ್ಶನ, ಪುಷ್ಮಾಂಡ ಬಲಿ, ಅಷ್ಟಾವಧಾನ ಸೇವೆ, ಸಂಗೀತ ಸೇವೆ, ಹಾಗೂ ರಾಷ್ಟ್ರ ಆಶೀರ್ವಾದ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಫೆ.2 ಭಾನುವಾರ ಶ್ರೀ ಮುದ್ದು ಮಾರುತಿ ಸ್ವಾಮಿಗೆ ಫಲ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ ನಡೆಯಲಿದೆ. ಅಮರಗಿರಿ ಶ್ರೀ ರಂಗನಾಥಸ್ವಾಮಿ ಸಮ್ಮುಖದಲ್ಲಿ ವಿಶೇಷ ಕದಳೀ ಛೇದನ ದೃಷ್ಟಿ ಪೂಜೆ ಹಾಗೂ ಅನ್ನದಾಸೋಹ ನಡೆಯಲಿದೆ. ಶ್ರೀ ಸುರೇಶ್ ಮತ್ತು ಕೇಶವ ಹಾಗೂ ಸಂಗಡಿಗರು ಧಾರ್ಮಿಕ ಕಾರ್ಯಕ್ರಮ ಆಗಮಿಕರಾಗಿ ಹೋಮ, ಹವನ ಹಾಗೂ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಎಂಎಲ್ಸಿ ಹಾಗೂ ಬೆಂಗಳೂರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಪ್ರಭಾಕರ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ವೇದಿಕೆ ಜರುಗಲಿದೆ. ಪ್ರಧಾನ ಅರ್ಚಕರಾದ ಶ್ರೀ ಹರ್ಷವರ್ಧನ ಸ್ವಾಮೀಜಿಯವರು ನೇತೃತ್ವ ವಹಿಸಲಿದ್ದಾರೆ.

ಬೆಂಗಳೂರಿನ ಸಂಖ್ಯಾಶಾಸ್ತ್ರಜ್ಞ ಡಾ. ಶ್ರೀ ಮಹರ್ಷಿ ಜಯಶ್ರೀನಿವಾಸ್, ನೊಣವಿನಕೆರೆ ಶ್ರೀ ಕಾಡುಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ಅರಸಿಕೆರೆ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಲೋಕಸಭಾ ಮಾಜಿ ಸದಸ್ಯ ಡಿ.ಕೆ.ಸುರೇಶ್, ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ, ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಹೆಚ್.ಸಿ.ಲಲಿತ್ ರಾಘವ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.