ಹಾಸನ ಗನ್ ಶಾಟ್ ಪ್ರಕರಣ: ಪತ್ತೆಯಾಯಿತು ಮೃತರ ಗುರುತು

ಘಟನೆ ಬಗ್ಗೆ ಇನ್ನೂ ದೊರೆಯದ ಸ್ಪಷ್ಟತೆ

ಹಾಸನ: ನಗರದ ಹೊಯ್ಸಳ ನಗರದಲ್ಲಿ ಗನ್ ಶಾಟ್ ಗೆ ಬಲಿಯಾದ ಇಬ್ಬರ ಗುರುತು ಪತ್ತೆಯಾಗಿದ್ದು, ಘಟನೆಗೆ ರಿಯಲ್ ಎಸ್ಟೇಟ್ ಜಗಳ ಕಾರಣ ಎನ್ನಲಾಗುತ್ತಿದೆ.

ಬೆಂಗಳೂರು ಮೂಲದ ಆಸೀಫ್ (46) ಮತ್ತು ಹಾಸನದ ಆಡುವಳ್ಳಿಯ ಶರಾಫತ್ ಅಲಿ (52) ಮೃತರು. ಇವರಿಬ್ಬರೂ ಸ್ನೇಹಿತರಾಗಿದ್ದು ಶುಂಠಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.

ಮೃತ ಶರಾಪತ್ ಮೂಲತಃ ದೆಹಲಿಯವನಾಗಿದ್ದು ಹಲವು ವರ್ಷಗಳಿಂದ ಹಾಸನದಲ್ಲಿ ವಾಸವಿದ್ದರು. ಇವರಿಬ್ಬರೂ ಮಧ್ಯಾಹ್ನ 12ರ ಸಮಯದಲ್ಲಿ ಕೆ.ಎ.09 MB 3868 ಟೆರಾನೋ ಕಾರಿನಲ್ಲಿ ಹೊಯ್ಸಳ ನಗರಕ್ಕೆ ಬಂದಿದ್ದರು.

ನಂತರ ನಡೆದ ಗುಂಡಿನ ದಾಳಿಯ ಬಗ್ಗೆ ಇನ್ನೂ ಸ್ಪಷ್ಟತೆ ದೊರೆಯಬೇಕಿದೆ.