ಹಾಸನದಲ್ಲಿ ಇಂದಿನಿಂದ 2 ದಿನಗಳ ಸಾಹಿತ್ಯೋತ್ಸವ ಕಲಾಭವನದಲ್ಲಿ ಸಕಲ ಸಿದ್ಧತೆ: ಎಂಟು ಗೋಷ್ಠಿ-ಹಲವು ಚರ್ಚೆ: ನಾಡಿನ ನೂರಾರು ಸಾಹಿತ್ಯ ಕೃಷಿಕರ ಸಮಾಗಮ

ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ  ಇಂದಿನಿಂದ ಎರಡು ದಿನಗಳ ಕಾಲ ಹಾಸನ ಸಾಹಿತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುವ ಸಾಹಿತ್ಯ ಹಬ್ಬಕ್ಕೆ ನಾಡೋಜ ಡಾ.ಹಂಪ ನಾಗರಾಜಯ್ಯ ಬೆಳಗ್ಗೆ 1೦ ಗಂಟೆಗೆ ಶುಭ ಚಾಲನೆ ನೀಡುವರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಸಾಹಿತ್ಯೋತ್ಸವ ಸಮಿತಿ ಅಧ್ಯಕ್ಷ ಹೆಚ್.ಬಿ.ಮದನಗೌಡ ಆಗಮಿಸುವರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶಗೌಡ ಪ್ರಾಸ್ತಾವಿಕ ನುಡಿ ಆಡಿದರೆ, ಬಿ.ಆರ್.ಲಕ್ಷಣರಾವ್ ಸಂಚಾಲಕರ ನುಡಿ ಆಡುವರು. ಗಿರೀಶ್‌ರಾವ್ ಹತ್ವಾರ್(ಜೋಗಿ) ಆಶಯ ನುಡಿಗಳನ್ನಾಡುವರು.

ಮೊದಲ ದಿನ:

ಗೋಷ್ಠಿ-1: ಗೀತ-ಸಂಗೀತ ಸಮಯ: 11.45 ರಿಂದ 1 ಗಂಟೆನಿರ್ವಹಣೆ: ಬನುಮ ಗುರುದತ್, ಶ್ರೀನಿವಾಸ್ ಪ್ರಭು, ಪಂಚಮ ಹಳಿಬಂಡಿ, ನಾಗಚಂದ್ರಿಕಾ ಭಟ್, ಕೀಬೋರ್ಡ್-ಕೃಷ್ಣ ಉಡುಪ ತಬಲ-ಎಂ.ಸಿ. ಶ್ರೀನಿವಾಸ್

ಗೋಷ್ಠಿ-2: ನಮ್ಮ ನೆಲೆ-ನಮ್ಮ ಸೆಲೆ ಸಮಯ:2.00 ರಿಂದ 2.45 ಗಂಟೆ
ನಿರ್ವಹಣೆ: ಡಾ.ಭವ್ಯ ನವೀನ್
ಸಂಧ್ಯಾರಾಣಿ, ಪಿ.ಚಂದ್ರಿಕಾ, ರೇಣುಕಾ ರಮಾನಂದ
ಗೋಷ್ಠಿ-3: ರಂಗಾಂತರಂಗ ಸಮಯ: 2.45 ರಿಂದ 3.30ಗಂಟೆ ನಿರ್ವಹಣೆ: ಉಲಿವಾಲ ಮೋಹನ್,ಹುಲುಗಪ್ಪ ಕಟ್ಟೀಮನಿ, ಪ್ರಕಾಶ್ ಗರುಡ, ಬೇಲೂರು ರಘುನಂದನ, ಅಕ್ಷತಾ ಪಾಂಡವಪುರ

ಗೋಷ್ಠಿ-4: ಕಂಡದ್ದು ಕಂಡಹಾಗೆ ಸಮಯ: 3.45 ರಿಂದ 5 ಗಂಟೆ
ನಿರ್ವಹಣೆ: ಗಿರೀಶ್‌ರಾವ್ ಹತ್ವಾರ್(ಜೋಗಿ)
ಟಿ.ಎನ್.ಸೀತಾರಾಮ್, ವಿ.ಮನೋಹರ್, ಡಾ. ಅನುರಾಧ ಅನಂತಮೂರ್ತಿ, ಮಂಡ್ಯ ರಮೇಶ್, ಚಂಪಾಶೆಟ್ಟಿ, ವೀರಕಪುತ್ರ ಶ್ರೀನಿವಾಸ್

ಎರಡನೇ ದಿನ:
ಗೋಷ್ಠಿ-5: ಹೊಸ ದನಿ-ಹೊಸ ಬನಿ ಸಮಯ: 10ರಿಂದ 10.45 ಗಂಟೆ
ನಿರ್ವಹಣೆ: ಚಲಂ ಹಾಡ್ಲಹಳ್ಳಿ
ಗುರುಪ್ರಸಾದ್ ಕಂಟಲಗೆರೆ, ಕುಸುಮ ಆಯರಹಳ್ಳಿ, ಸಚಿನ್ ತೀರ್ಥಹಳ್ಳಿ

ಗೋಷ್ಠಿ-6: ನಾಳೆಗಳು ನಮಗಿರಲಿ: 10.45 ರಿಂದ 11.30 ಗಂಟೆ
ನಿರ್ವಹಣೆ: ಹೆತ್ತೂರು ನಾಗರಾಜ್
ನಾಗೇಶ ಹೆಗಡೆ, ಅಹಮದ್ ಹಗರೆ, ವಿ.ಗಾಯತ್ರಿ

ಗೋಷ್ಠಿ-7: ಕವಿತಾ ಸಮಯ- ಸಮಯ: 11.45 ರಿಂದ 1 ಗಂಟೆ
ನಿರ್ವಹಣೆ: ಡಾ.ದೊರೇಶ್ ಬಿಳಿಕೆರೆ
ತಮಿಳು ಸೆಲ್ವಿ, ಮಾನಸಿ ಸುಧೀರ್

ಗೋಷ್ಠಿ-8: ಎಐ ಅಮಾನುಷ ಕೈ-ಸಮಯ: 2 ರಿಂದ 2.45 ಗಂಟೆ
ನಿರ್ವಹಣೆ: ಮಂಜು ಬನವಾಸೆ
ಮಧು ವೈ.ಎನ್., ಮೇಘನಾ ಸುಧೀಂದ್ರ, ಶರತ್ ಭಟ್ ಸೇರಾಜೆ

ಜ.7 ರಂದು ಮಧ್ಯಾಹ್ನ 2.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಘವೇಂದ್ರ ಪಾಟೀಲ ಸಮಾರೋಪ ನುಡಿಗಳನ್ನಾಡುವರು. ಬಾನುಮುಷ್ತಾಕ್ ಅಧ್ಯಕ್ಷತೆ ವಹಿಸುರು. ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಬಿ.ಆರ್.ಲಕ್ಷಣರಾವ್, ಗಿರೀಶ್ ರಾವ್ ಹತ್ವಾರ್(ಜೋಗಿ), ಜಿಪಂ ಉಪ ಕಾರ್ಯದರ್ಶಿ ಸಿ.ಚಂದ್ರಶೇಖರ್, ಹುಡಾ ಆಯುಕ್ತ ರಮೇಶ್, ನಗರಸಭೆ ಆಯುಕ್ತ ನರಸಿಂಹಮೂರ್ತಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ತಾರಾನಾಥ್, ಡಾ.ಹೆಚ್.ಎಲ್.ಮಲ್ಲೇಶಗೌಡ, ಹೆಚ್.ಬಿ.ಮದನಗೌಡ, ಜೆ.ಆರ್.ಕೆಂಚೇಗೌಡ ಭಾಗವಹಿಸುವರು.

ವಿಶೇಷ ಆಹ್ವಾನಿತರಾಗಿ ವಿವೇಕ ಶ್ಯಾನುಭಾಗ, ರಂಜನಿ ಪ್ರಭು, ನ.ರವಿಕುಮಾರ್, ಗೋಪಾಲಕೃಷ್ಣ ಕುಂಟಿನಿ, ರಾಜೇಶ್ ಶೆಟ್ಟಿ, ಶ್ರೀನಿವಾಸ್ ದೇಶಪಾಂಡೆ, ವಸುಧೇಂದ್ರ, ಶೈಲಜಾಹಾಸನ್, ಕೌಂಡಿನ್ಯ, ಮಾ.ಶಿವಮೂರ್ತಿ, ಅರಕಲಗೂಡು ಜಯಕುಮಾರ್, ಎಡೇಹಳ್ಳಿ ಮಂಜುನಾಥ್, ಪರಮೇಶ್ ಮಡಬಲು, ತೆಂಕನಹಳ್ಳಿ ಉಮೇಶ್, ಡಿ.ಎಸ್.ರಾಮಸ್ವಾಮಿ, ಡಾ.ಹೆಚ್.ಎಲ್.ಜನಾರ್ಧನ್, ಸಿ.ಕೆ.ಹರೀಶ್, ಪೃಥ್ವಿಸೂರಿ ಭಾಗವಹಿಸುವರು.

ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸವಿಯನ್ನು ಮರೆಯುವ ಮುನ್ನವೇ ಅರೆ ಮಲೆನಾಡು ಹಾಸನದಲ್ಲಿ ಅದೇ ಕಂಪನ್ನು ಮುಂದುವರಿಸುವ ಆಶಯವಾಗಿ ಸಾಹಿತ್ಯದ ಕಂಪು ಪಸರಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಶೇಷ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಡಿನ ಪ್ರಖ್ಯಾತ ಸಾಹಿತಿಗಳು, ಚಿಂತಕರು, ಲೇಖಕರು ಹಾಗೂ ಸಾಹಿತ್ಯಾಸಕ್ತರು ಭಾಗಿಯಾಗಲಿದ್ದಾರೆ.

ಹಿರಿಯ-ಕಿರಿಯರ ಸಮಾಗಮ, ಚಿಂತನ-ಮAಥನ ಜೊತೆಗೆ ಸಾಹಿತ್ಯದ ವಿವಿಧ ಪ್ರಾಕಾರಗಳ ಕುರಿತು ಚರ್ಚೆ ನಡೆಯಲಿದೆ.
ಜಿಲ್ಲೆಯಲ್ಲಿ ಸಾಂಸ್ಕöÈತಿಕ ಮತ್ತು ಸಾಹಿತ್ಯ ಚಟುವಟಿಕೆಯನ್ನು ಜೀವಂತವಾಗಿಡುವ ಸದುದ್ದೇಶದಿಂದ ಈ ಉತ್ಸವ ಹಮ್ಮಿಕೊಳ್ಳಲಾಗಿದೆ. ನಾಡಿನ ಸಾರಸ್ವತ ಲೋಕಕ್ಕೆ ಕತೆ, ಕವಿತೆ, ಜಾನಪದ, ವಿಮರ್ಶೆ, ಭಾಷಾಂತರ, ಅನುವಾದ ಹೀಗೆ ಹಾಸನ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಇದರ ಆಳ-ಅಗಲವನ್ನು
ಪುನರ್ ಮನನ ಮಾಡುವುದು ಸಾಹಿತ್ಯ ಹಬ್ಬದ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.