ಹಾಸನ: ಜಿಲ್ಲಾ ಕ್ರೀಡಾಂಗಣದ ಫುಟ್ಬಾಲ್ ಮೈದಾನದಲ್ಲಿ ಸರಕಾರಿ ನೌಕರರ ಕ್ರೀಡಾಕೂಟಕ್ಕಾಗಿ ಜರ್ಮನ್ ಟೆಂಟ್ ಹಾಕಿರುವುದಕ್ಕೆ ಹಾಸನ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ತೀವ್ರ ಖಂಡನೆ ಜೊತೆಗೆ ಆಕ್ರೋಶ ಹೊರ ಹಾಕಿದೆ.
ಹಾಸನದ ಜಿಲ್ಲಾ ಕ್ರೀಡಾಂಗಣ ರಾಜ್ಯದಲ್ಲೇ ಮಾದರಿ ಕ್ರೀಡಾಂಗಣವಾಗಿದೆ. ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಬಂದÀ ಅನುದಾನದಿಂದ ಸಿಂಥೆಟಿಕ್ ಟ್ರಾ÷್ಯಕ್ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿ, ಸ್ವಚ್ಛ ಹಾಗೂ ಸುಂದರ ಜಿಲ್ಲಾ ಕ್ರೀಡಾಂಗಣ ನಿರ್ಮಾಣವಾಗಿದೆ.
ಕ್ರೀಡಾಂಗಣವನ್ನು ಕ್ರೀಡಾ ಸಂಬAಧಿ ಚಟುವಟಿಕೆ ಹಾಗೂ ಪಂದ್ಯಾವಳಿಗಳಿಗೆ ನೀಡಬೇಕು. ರಾಜಕೀಯ ಅಥವಾ ಜಿಲ್ಲಾಡಳಿತದ ಸಭೆ, ಸಮಾರಂಭ ನಡೆಸಲು ಅವಕಾಶ ನೀಡಬಾರದು ಎಂದು ಹಿಂದೆ ಕ್ರೀಡಾ ಪ್ರೇಮಿಗಳು ಮತ್ತು ಸಂಘಟನೆಗಳು ಡಿಸಿ ಅವರಿಗೆ ಮನವಿ ಮಾಡಿದ್ದೆವು.
ಹಾಕಿ, ಫುಟ್ಬಾಲ್, ಹ್ಯಾಂಡ್ ಬಾಲ್, ಕೊಕೋ, ಕಬಡ್ಡಿ ಮುಂತಾದ ಕ್ರೀಡೆಗಳಿಗೆ ಜಿಲ್ಲೆಯಲ್ಲಿ ಕಡಿಮೆ ಮೈದಾನಗಳಿದ್ದು, ಅದರಲ್ಲೂ ನಗರದಲ್ಲಿ ಅನೇಕ ಕ್ರೀಡಾಪಟುಗಳು ಅಭ್ಯಾಸ ಮಾಡಲು ಜಾಗವಿಲ್ಲದೆ ಪರದಾಡುತ್ತಿದ್ದಾರೆ.
ಇಲ್ಲಿ ಫುಟ್ಬಾಲ್ ಬ್ಯಾಸ್ಕೆಟ್‌ಬಾಲ್, ಹಾಕಿ, ಜೆಮ್ನಾö್ಯಸ್ಟಿಕ್, ವಾಲಿಬಾಲ್ ತರಬೇತುದಾರರಿರುವುದರಿಂದ ಅಭ್ಯಾಸಕ್ಕೆ ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿ, ಒಂದೇ ಮೈದಾನದಲ್ಲಿ ಅಭ್ಯಾಸ ಕಷ್ಟವಾಗಿದೆ.
ಹೀಗಿದ್ದರೂ ಜಿಲ್ಲಾಡಳಿತ ಫುಟ್‌ಬಾಲ್ ಕ್ರೀಡಾಂಗಣವನ್ನು ಸಭೆ ಸಮಾರಂಭಗಳಿಗೆ ನೀಡುವುದರಿಂದ ಆಯೋಜಕರು ಜರ್ಮನ್ ಟೆಂಟ್, ಶಾಮಿಯಾನ ಹಾಕಲು ಗುಂಡಿ ತೋಡಿ ಮೈದಾನ ಹಾಳು ಮಾಡುತ್ತಾರೆ ಎಂದು ಬೇಸರ ಹೊರ ಹಾಕಿದೆ.
ಜಿಲ್ಲಾ ಕ್ರೀಡಾಂಗಣ ಇರುವುದೇ ಕ್ರೀಡಾ ಚಟುವಟಿಕೆ ನಡೆಸಲು ಅದಕ್ಕೆ ನಮ್ಮ ವಿರೋಧವಿಲ್ಲ, ಆದರೆ ಜರ್ಮನ್ ಟೆಂಟ್ ಹಾಕುವುದನ್ನು ಖಂಡಿಸಿದೆ.
ಅದರಲ್ಲೂ ಕ್ರೀಡಾಪಟುಗಳ ವಿರೋಧದ ನಡುವೆಯೂ ಕ್ರೀಡಾಂಗಣ ಅಧಿಕಾರಿಗಳು ಟೆಂಟ್ ಹಾಕಲು ಅವಕಾಶ ಮಾಡಿಕೊಟ್ಟಿರುವುದನ್ನು ವಿರೋಧಿಸಿದೆ. ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಬೃಹತ್ ಜರ್ಮನ್ ಟೆಂಟ್‌ನ್ನು ಫುಟ್ಬಾಲ್ ಮೈದಾನದಲ್ಲೇ ಹಾಕಲಾಗಿದೆ.
ಇದರಿಂದ ಮೈದಾನ ಹಾಳಾಗಿದೆ. ಈ ಬಗ್ಗೆ ಕೇಳಿದರೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಹರೀಶ್ ಅವರು, ಜಿಲ್ಲಾಧಿಕಾರಿ ಅವರ ಆದೇಶದ ಮೇಲೆ ಮೈದಾನ ನೀಡಲಾಗಿದೆ ಎಂದು ಹಾರಿಕೆ ಉತ್ತರ ನೀಡಿದರು ಎಂದು ಅಸೋಸಿಯೇಷನ್ ಖಜಾಂಚಿ ವೇಣುಗೋಪಾಲ್ ಆರೋಪಿಸಿದ್ದಾರೆ.
ಈ ಹಿಂದೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಹಾಗೂ ಶೌಚಾಲಯ ಸಮಸ್ಯೆ ಬಗ್ಗೆ ಡಿಸಿ ಅವರ ಗಮನ ತರಲಾಗಿತ್ತು. ನಂತರ ಡಿಸಿ ಅವರು ಭೇಟಿ ನೀಡಿ ಶೌಚಾಲಯ ಹಾಗೂ ಮೂಲ ಸೌಕರ್ಯ ಒದಗಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ವ್ಯವಸ್ಥೆ ಆಗಿಲ್ಲ ಎಂದು ದೂರಿದ್ದಾರೆ. ಡಿಸಿ ಅವರು ಈ ಬಗ್ಗೆ ಗಂಭೀರವಾಗಿ ಪರಿಗಣ ಸಿ ಕ್ರೀಡಾಪಟುಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಕ್ರೀಡಾಪಟುಗಳು ಮನವಿ ಮಾಡಿದ್ದಾರೆ.