ತುಮಕೂರು ಜಿಲ್ಲೆಯ ಕೆರೆ ತುಂಬಿಸಲು ಇಂದು‌ ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ

ಹೇಮಾವತಿ ನಾಲೆ‌ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತುಮಕೂರು ಡಿಸಿ ಆದೇಶ

ಹಾಸನ: ಜಿಲ್ಲೆಯಲ್ಲಿಯೇ ನೀರಿಗೆ ಬರ ಎದುರಾಗಿರುವಾಗ ಗೊರೂರಿನ ಹೇಮಾವತಿ ಜಲಾಶಯದಿಂದ ಇಂದು ತುಮಕೂರಿನ ಕೆರೆಗಳಿಗೆ ನಾಲೆ ಮೂಲಕ ನೀರು ಹರಿಸಲು ಸರ್ಕಾರ ತೀರ್ಮಾನಿಸಿದೆ.

ತುಮಕೂರು ಜಿಲ್ಲಾ ವ್ಯಾಪ್ತಿಯ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ಮಂಗಳವಾರ ಮಧ್ಯಾಹ್ನ ನೀರು ಬಿಡುಗಡೆ ಮಾಡಲಾಗುತ್ತಿದೆ.

ತುಮಕೂರು ಶಾಖಾ ನಾಲೆ ಸರಪಳಿ 70 ಕಿ.ಮೀ.ನಿಂದ 145 ಕಿ.ಮೀ. ವರೆಗೆ ನೀರನ್ನು ಹರಿಸಲು ಉದ್ದೇಶಿಸಲಾಗಿದೆ.‌ ಈ ಹಿನ್ನೆಲೆಯಲ್ಲಿ ತುಮಕೂರಿನ ನಾಲೆಗಳ ಉದ್ದಕ್ಕೂ ಮಾರ್ಚ್‌ 12 ರಿಂದ ನಿಷೇಧಾಜ್ಞೆ ಜಾರಿಗೊಳಿಸಿ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಆದೇಶ ಹೊರಡಿಸಿದ್ದಾರೆ.