ವಿಡಿಯೋ: ಆಪರೇಷನ್ ಮಖ್ನಾ ಸಕ್ಸಸ್: ಮನೆ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಕಾಡಾನೆ ಸೆರೆ

ಹಾಸನ, ಮಾರ್ಚ್ 23:  ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಮಖ್ನಾ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಜಾನುವಾರು, ಮನೆಗಳ ಮೇಲೆ ದಾಳಿ ಮಾಡುತ್ತಿದ್ದ ಈ ಕಾಡಾನೆಗೆ ಇಂದು ಬೆಳಿಗ್ಗೆ ಅರವಳಿಕೆ ನೀಡಲು ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಯಶಸ್ಸು ಪಡೆದಿದೆ.

ವೈದ್ಯ ಡಾ. ರಮೇಶ್‌ ಹರಸಾಹಸ
ಮಖ್ನಾ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವುದು ಸುಲಭವಿರಲಿಲ್ಲ. ವೈದ್ಯ ಡಾ. ರಮೇಶ್ ನೇತೃತ್ವದ ತಂಡ ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಪಟ್ಟು ಅರವಳಿಕೆ ಚುಚ್ಚುಮದ್ದು ನೀಡಿತು. ಮೊದಲಿನ ಪ್ರಯತ್ನದಲ್ಲಿ ಗುರಿ ತಪ್ಪಿದರೂ, ಕೊನೆಗೆ ಯಶಸ್ವಿಯಾಗಿ ಡಾರ್ಟ್ ಮಾಡಲಾಯಿತು, ಸ್ವಲ್ಪ ದೂರ ಓಡಿದ ಕಾಡಾನೆ ಅರಿವಳಿಕೆ ಪರಿಣಾಮ ಕುಸಿದು ಬಿತ್ತು.

ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ಸು
ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅರಿವಳಿಕೆ ತಜ್ಞರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕಾರ್ಯ ಮುಂದುವರಿಯುತ್ತಿದೆ.

ಸ್ಥಳೀಯ ಗ್ರಾಮಸ್ಥರು ಮತ್ತು ಅಧಿಕಾರಿಗಳು ಈ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.