ಭವಾನಿ ರೇವಣ್ಣ ಕಾರು ಅಪಘಾತ ಪ್ರಕರಣದ ದೂರುದಾರ ಯಾರು ಗೊತ್ತೇ? ಇಲ್ಲಿದೆ ಎಫ್‌.ಐ.ಆರ್.‌ ಪ್ರತಿ

ಹಾಸನ: ರಾಜ್ಯಾದ್ಯಂತ ಸದ್ದು ಮಾಡಿದ್ದ ಭವಾನಿ ರೇವಣ್ಣ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ ಐಆರ್‌ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಿನ ಮಾಲೀಕರಾಗಲೀ, ಭವಾನಿ ರೇವಣ್ಣ ಅವರಾಗಲೀ ಬೈಕ್‌ ಸವಾರನ ವಿರುದ್ಧ ದೂರು ನೀಡಿಲ್ಲ.
ಬದಲಿಗೆ ಅಪಘಾತವಾದಾಗ ಕಾರು ಚಲಾಯಿಸುತ್ತಿದ್ದ ಮಂಜುನಾಥ್‌ ಎನ್ನುವ ಚಾಲಕ ಬೈಕ್‌ ಚಾಲಕ ಶಿವಣ್ಣ ಅವರ ವಿರುದ್ಧ ಸಾಲಿಗ್ರಾಮ ಠಾಣೆಗೆ ದೂರು ನೀಡಿದ್ದು, ಅದರನ್ವಯ ಪೊಲೀಸರು ಶಿವಣ್ಣ ವಿರುದ್ಧ ಅತಿವೇಗ, ಅಜಾಗರೂಕ ಚಾಲನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಸಾರಾಂಶ:
ಪಿರ್ಯಾಧಿರವರಾದ ಮಂಜನಾಥ್ ಬಿನ್ ನಾಗೇಗೌಡ 34 ವರ್ಷ, ಒಕ್ಕಲಿಗ ಜನಾಂಗ,ಡ್ರೈವರ್ ಕೆಲಸನಂಬಿಹಳ್ಳಿ ಗ್ರಾಮ ಚನ್ನರಾಯಪಟ್ಟಣ
ತಾಲೂಕು ರವರು ದಿನಾಂಕ 01.12.2023 ರಂದು ಮಧ್ಯಾಹ್ನ 03.00 ಗಂಟೆಯ ಸಮಯದಲ್ಲಿ ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ , ನನ್ನ ಬಾಬ್ತು KA-03 ΝΚ-0005, ΤOYOTA VELLFIRE HYBRID ಕಾರ್ ಗೆ ರಸ್ತೆ ಅಪಘಾತವಾಗಿ ಕಾರ್ ನ ಮುಂಭಾಗ ಜಖಂಗೊಂಡಿರುವ ಬಗ್ಗೆ ದೂರು.
 ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ನಾನು ಚಾಲಕ ವೃತ್ತಿ ಮಾಡಿಕೊಂಡಿರುತ್ತೇನೆ ದಿನಾಂಕ 01/12/2023 ರಂದು ಮದ್ಯಾಹ್ನ 12.45 ಗಂಟೆ ಸಮಯದಲಿ.. ಕಾರ್ಯ ನಿಮಿತ್ತ ಸಾಲಿಗ್ರಾಮದ ಪ್ರಕಾಶ್ ರವರ ಮನೆಗೆ ಭೇಟಿ ನೀಡಿ ಹೊಳೆನರಸೀಪುರಕ್ಕೆ ಹೋಗಲು KA-03 NK-0005 TOYOTA VELLFIRE HYBRID ಕಾರ್ ನಲ್ಲಿ ಸಾಲಿಗ್ರಾಮ, ಹಳ್ಳಿಮೈಸೂರು ರಸ್ತೆಯ ಮಾರ್ಗವಾಗಿ ರಾಂಪುರ ಗ್ರಾಮದ ಜಂಕ್ಷನ್ ಬಳಿ ಕಾರನ್ನು ನಾನು ಚಾಲನೆ ಮಾಡುವಾಗ ಎದುರುಗಡೆಯಿಂದ ಅಂದರೆ ಹಳ್ಳಿಮೈಸೂರು ಮಾರ್ಗವಾಗಿ ಸಾಲಿಗ್ರಾಮಕ್ಕೆ ಬರುತ್ತಿದ್ದ KA-54 K-0163 HERO HONDA I SMART ಬೈಕ್ ಚಾಲಕ ಅತಿವೇಗ, ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಬಂದು ನಾನು ಚಾಲನೆ ಮಾಡುತ್ತಿದ್ದ ಕಾರ್ ನ ಮುಂಭಾಗಕ್ಕೆ ಡಿಕ್ಕಿ ಮಾಡಿದ್ದು ಸ್ಥಳದಲ್ಲಿ. ಬೈಕ್ ಚಾಲಕ ಕೆಳಗೆ ಬಿದ್ದಿದ್ದು ಅಲೆ. ಇದ್ದ ಸ್ಥಳಿಯರು ಉಪಚರಿಸಿ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ಶಿವಣ್ಣ ಬಿನ್ ಕೃಷ್ಣಗೌಡ 33 ವರ್ಷ, ವ್ಯವಸಾಯ ತಂದ್ರೆ ಕೊಪ್ಪಲು ಗ್ರಾಮ ಸಾಲಿಗ್ರಾಮ ತಾಲೂಕು ಎಂದು ತಿಳಿಸಿದ್ದು ಆತನಿಗೂ ಯಾವುದೇ ಗಾಯಗಳು ಆಗಿರುವುದಿಲ್ಲಾ, ನಂತರ ಕಾರ್ ನ ಮುಂಭಾಗ ನೋಡಲಾಗಿ ಕಾರ್ ನ ಬಂಪರ್, ಬಾನೆಟ್, ನಂಬರ್ ಪ್ರೈಟ್ ಮುಂಭಾಗದ ಬಿಡಿ ಭಾಗಗಳು ಜಖಂ ಗೊಂಡಿರುತ್ತದೆ. ಆನಂತರ ಸ್ಥಳಿಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ KA-54 K-0163 ನಂಬರಿನ ಬೈಕ್ ಚಾಲನೆ ಮಾಡಿರುವ ಶಿವಣ್ಣ ಬಿನ್ ಕೃಷ್ಣಗೌಡ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈ ಗೊಳ್ಳಬೇಕಾಗಿ ಹಾಗೂ ಕಾರಿನ ಜಖಂಗೊಂಡಿರುವ ಮುಂದಿನ ಕ್ರಮ ಕೈಗೊಳ್ಳುಲು ದೂರು ನೀಡಿರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಈ ಪ್ರಥಮ ವರದಿ.
ಎಂದು ದೂರು ಮುಕ್ತಾಯವಾಗಿದೆ.