ಜೇನಿನ ವಿಷಕ್ಕೆ ಬಲಿಯಾದ ಕೃಷಿಕನ ಪ್ರಾಣ; ರೈತನ ಮೇಲೆ ದಾಳಿ ಮಾಡಿದ ನೂರಾರು ಹೆಜ್ಜೇನು

ಹಾಸನ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹೆಜ್ಜೇನು ದಾಳಿಗೆ ಸಿಲುಕಿ ತೀವ್ರ ಅಸ್ವಸ್ಥತೆ ಒಳಗಾಗಿದ್ದ ರೈತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ, ಧರಸಿಹಳ್ಳಿ ಗ್ರಾಮದ ಆನಂದ್ (45) ಮೃತ ರೈತ.

ಜಮೀನಿನಲ್ಲಿ‌ ಕೆಲಸ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಹೆಜ್ಜೇನುಗಳಿಂದ ತಪ್ಪಿಸಿಕೊಳ್ಳಲು ಹರಸಾಹಸಪಟ್ಟ ಆನಂದ್ ಅವರಿಗೆ ನೂರಾರು ಜೇನು ಹುಳುಗಳು ಕಡಿದಿದ್ದವು.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು.

ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.