ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಆರಂಭ; ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಬಿಜೆಪಿ ಸದಸ್ಯರು; ಅಧ್ಯಕ್ಷರಾಗಿ ಚಂದ್ರೇಗೌಡ ಆಯ್ಕೆ ಸಾಧ್ಯತೆ

ಹಾಸನ : ಹಾಸನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ 9 ನೇ ವಾರ್ಡ್ ಸದಸ್ಯ ಚಂದ್ರೆಗೌಡ ಹಾಗೂ 8 ನೇ ವಾರ್ಡ್ ಸದಸ್ಯ ಗಿರೀಶ್ ಚನ್ನವೀರಪ್ಪ ಕಾಂಗ್ರೆಸ್ ಸದಸ್ಯೆ 17ನೇ ವಾರ್ಡ್ ನ ರೂಹಿನಾ ತಾಜ್ ನಾಮಪತ್ರ ಸಲ್ಲಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ 5 ನೇ ವಾರ್ಡ್‌ನ ಹೇಮಲತಾಕಮಲ್ ಕುಮಾರ್, 35 ನೇ ವಾರ್ಡ್ ಲತಾದೇವಿಸುರೇಶ್, ಸದಸ್ಯ ಅಮಿರ್‌ಜಾನ್ ಹಾಗೂ ಬಿಜೆಪಿಯ 14 ನೇ ವಾರ್ಡ್ ಸದಸ್ಯೆ ಶಿಲ್ಪಾವಿಕ್ರಂ ನಾಮಪತ್ರ ಸಲ್ಲಿಸಿದ್ದಾರೆ.

ಮೈತ್ರಿ ಕಾರಣದಿಂದ ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಬಿಜೆಪಿ‌ಯಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ಉಪಾಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಿದೆ.

ಮಧ್ಯಾಹ್ನ 1.30 ರವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದು, ಅಧ್ಯಕ್ಷ ಸ್ಥಾನಕ್ಕೆ 9 ನೇ ವಾರ್ಡ್ ಸದಸ್ಯ ಜೆಡಿಎಸ್‌ನ ಚಂದ್ರೇಗೌಡ ಆಯ್ಕೆ ಬಹುತೇಕ ಖಚಿತವಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆಯಾಗಿರುವ ನಾಮಪತ್ರ ಹಿಂಪಡೆಯದಿದ್ದರೆ ಚುನಾವಣೆ ನಡೆಯುವ ಸಾಧ್ಯತೆಯಿದೆ.