ಚಾರ್ಮಾಡಿ ಘಾಟ್ ಕಗ್ಗತ್ತಲಲ್ಲಿ ಒಂಟಿ ಸಲಗ ಪ್ರತ್ಯಕ್ಷ: ನಿಯಂತ್ರಣ ತಪ್ಪಿ ಚರಂಡಿಗಿಳಿದ ಬೊಲೆರೋ ಜೀಪ್

ತಪ್ಪಿದ ಭಾರಿ ಅನಾಹುತ| ಚಾರ್ಮಾಡಿ ಘಾಟ್ ಮಾರ್ಗದ ಪ್ರಯಾಣಿಕರಲ್ಲಿ ಆತಂಕ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯ 8 ಹಾಗೂ 9 ನೇ ತಿರುವಿನ ಮಧ್ಯ ಕಗ್ಗತ್ತಲಲ್ಲಿ ನಿಂತಿದ್ದ ಒಂಟಿಸಲಗ ಕಂಡು ಗಾಬರಿಯಾಗದ ಬೊಲೊರೋ ಚಾಲಕ ನಿಯಂತ್ರಣ ಕಳೆದುಕೊಂಡಿದ್ದ ವಾಹನ ರಸ್ತೆ ಬದಿ ಚರಂಡಿಗೆ ಇಳಿದಿದ್ದು ಭಾರಿ ಅನಾಹುತ ತಪ್ಪಿದೆ.

ಬಹಳ ಸಮಯ ರಸ್ತೆ ಪಕ್ಕದಲ್ಲಿಯೇ ನಿಂತಿದ್ದ ಆನೆ ದಟ್ಟಮಂಜು ಆವರಿಸಿದ್ದರಿಂದ ವಾಹನ ಚಾಲಕರಿಗೆ ಹತ್ತಿರ ಬರುವವರೆಗೂ ಕಾಣಿಸುತ್ತಿರಲಿಲ್ಲ. ಹೀಗಾಗಿ ಚಾಲಕ ಗಾಬರಿಗೊಂಡಿದ್ದಾನೆ.

ಆನೆ ರಸ್ತೆಯಲ್ಲೇ ನಿಂತಿದ್ದರಿಂದ ಚಾಲಕರು ದೂರದಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡರು. ಸಲಗ ಕಾಡಿನತ್ತ ತೆರಳಿದ ನಂತ್ರ ವಾಹನಗಳ ಸಂಚಾರ ಸುಗಮವಾಯಿತು.