ಹಾಸನ: ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದ್ದು ಕಿಲೋಮೀಟರ್‌ಗಟ್ಟಲೆ ಭಕ್ತರು ಸಾಲಿನಲ್ಲಿ ನಿಂತಿರುವುದನ್ನು ಒತ್ತಡ ನಿವಾರಣೆಗೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಫೀಲ್ಡಿಗಿಳಿದಿದ್ದಾರೆ.
ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದರ್ಶನ ಪಡೆಯುತ್ತಿರುವ ಸಾವಿರಾರು ಭಕ್ತರಿಂದ ಧರ್ಮದರ್ಶನ ಮಾತ್ರವಲ್ಲದೇ ವಿವಿಐಪಿ, 1000 ರೂ, 300 ರೂ. ಟಿಕೆಟ್ ನ ವಿಶೇಷ ದರ್ಶನದ ಸಾಲುಗಳೂ ತುಂಬಿ ತುಳುಕುತ್ತಿವೆ.
ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾದ ಹಿನ್ನೆಲೆಯಲ್ಲಿ ಖುದ್ದು ಫೀಲ್ಡ್‌ಗಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಹಾಸನಾಂಬೆ ದೇಗುಲದ ಮುಂದೆ ಚೇರ್ ಹತ್ತಿ ನಿಂತು ನೂಕುನುಗ್ಗಾಲಾಗದಂತೆ ಜನರನ್ನು ದೇವಿ ದರ್ಶನಕ್ಕೆ ಕಳುಹಿಸುತ್ತಿದ್ದಾರೆ.
ಮುಂಜಾನೆಯಿಂದಲೂ ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆಯುತ್ತಿದ್ದಾರೆ.