ನಮ್ಮೂರಿನ ಮತದಾರರೇ ನನ್ನ ಹೈಕಮಾಂಡ್; ಸಚಿವ ಕೆ.ಎನ್.ರಾಜಣ್ಣ

ನನ್ನ ನಡವಳಿಕೆ ಜನರು ಮೆಚ್ಚಬೇಕು ಅಷ್ಟೇ, ಯಾರೋ ಮುಖಂಡರನ್ನು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ.

ಹಾಸನ: ನಾವೇನು ಹೈಕಮಾಂಡ್ ಗುಲಾಮರಲ್ಲ ಎನ್ನುವ ಮೂಲಕ ಸುದ್ದಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮತ್ತೊಮ್ಮೆ ತಮ್ಮ ನಿಲುವು ಪುನರುಚ್ಚರಿಸಿದ್ದು, ನನಗೆ ನಾನೇ ಹೈಕಮಾಂಡ್‌, ನನಗೆ ಯಾರೂ ಹೈಕಮಾಂಡ್‌ ಇಲ್ಲ, ನಮ್ಮ ಊರಿನ ಮತದಾರರೇ  ನನಗೆ ಹೈಕಮಾಂಡ್‌ ಎಂದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಎಲ್ಲಾ ಇದ್ದಾರೆ. ಅವರಿಗೆ ಕೊಡಬೇಕಾದ ಗೌರವ ಅವರಿಗೂ ಕೊಡ್ತೇವೆ ಎಂದರು.

ಅವರ ಮಾತು ಯಾವುದು ಕೇಳಬೇಕು, ಕೇಳ್ತೇವೆ. ಅವರ ಮಾತನ್ನು ನಾನು ಧಿಕ್ಕರಿಸಲ್ಲ. ಅಲ್ಟಿಮೆಟ್ಲಿ ಐ ಬಿಲೀವ್ ಮೈ ಹೈಕಮಾಂಡ್‌, ಮೈ ಕಾಸ್ಟಿಟ್ಯೂಯನ್ಸಿ ಓಟರ್ಸ್ ಎಂದರು.

ಕೆ.ಎನ್.ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ತರ ಆಡ್ತಿದ್ದಾರೆ ಎಂಬ ಕೆಲ ನಾಯಕರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,  ಅವರ ಅಪ್ಪ ಅಂತ ಹೇಳಿ, ಅದಕ್ಕಿಂತ ಮೇಲೆ ಯಾರಾದರೂ ಇದ್ದರು ಅದಕ್ಕೂ ಅಪ್ಪನೇ.

ನನ್ನ ನಡವಳಿಕೆ ಜನರು ಮೆಚ್ಚಬೇಕು ಅಷ್ಟೇ, ಯಾರೋ ಮುಖಂಡರನ್ನು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ.

ಹೈಕಮಾಂಡ್‌ಗೆ ಹೆದರವರಿಗೆ ನಾವೇನು ಹೇಳಲು ಆಗುತ್ತೆ ಎಂಬ ಬಿ.ಶಿವರಾಮು ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅದು ನನ್ನ ಇಷ್ಟ ನಾನು ಯಾರಿಗೆ ಹೆದರಬೇಕು ಹೆದರುತ್ತೇನೆ.

ಐ ಆ್ಯಮ್ ಲಾಯಲ್, ಐ ಆ್ಯಮ್ ಒಬಿಡಿಯೆಂಟ್ ಟು ಹೈಕಮಾಂಡ್‌ ನಾಟ್ ದಿ ಸ್ಲೇವ್ ಇದನ್ನು ಪದೇ ಪದೇ ಹೇಳಿದ್ದೇನೆ ಎಂದರು.