ಹಾಸನ:ನಗರದಲ್ಲಿ ಗಾಳಿ-ಮಳೆಯೊಂದಿಗೆ ಭೋರ್ಗರೆದ ಮಳೆಯ ನಡುವೆಯೂ ಹಾಸನಾಂಬೆ ಸನ್ನಿಧಿ ಎದುರು ಹಚ್ಚಿದ್ದ ದೀಪ ಪ್ರಜ್ವಲಿಸಿ ಉರಿದಿದ್ದು ಇದು ಹಾಸನಾಂಬೆ ಪವಾಡ ಎಂದು ನೆರೆದಿದ್ದ ಭಕ್ತರು ಬಣ್ಣಿಸಿದ್ದಾರೆ
ನಗರದಲ್ಲಿ ಸುರಿದ ಭಾರಿ ಮಳೆಗೆ ಹಾಸನಾಂಬ ಉತ್ಸವದ ಅಂಗವಾಗಿ ನಗರ ವಿವಿಧೆಡೆ ಅಳವಡಿಸಲಾಗಿದ್ದ ಸ್ವಾಗತ ಕಮಾನುಗಳು ನೆಲ ಕಚ್ಚಿವೆ ಅಲ್ಲದೆ ನಗರದ ಅಲ್ಲಲ್ಲಿ ಬೃಹತ್ ಮರಗಳೇ ಉರುಳಿ ಬಿದ್ದಿವೆ ಆದರೆ ಹಾಸನಾಂಬ ಅಂಗಳದಲ್ಲಿ ಮಾತ್ರ ಪವಾಡವೇ ನಡೆದಿದ್ದು ನೆರೆದಿದ್ದ ಭಕ್ತರಿಗೆ ಅಚ್ಚರಿ ಮೂಡಿಸಿದೆ.
ಸತತ ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಭಾರಿ ಮಳೆಯ ನಡುವೆಯೂ ಯಾವುದೇ ಗಾಳಿ ಮಳೆಗೆ ಜಗ್ಗದೆ ದೇವಾಲಯದ ಎದುರು ಹಚ್ಚಿದ್ದ ದೀಪ ಪ್ರಜ್ವಲಿಸಿ ಉರಿದಿದೆ, ಇದನ್ನು ಕಂಡ ಭಕ್ತರು ಇದು ದೇವಿಯ ಮಹಿಮೆಯೇ ಸರಿ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.