ವಿಕ್ರಂ ಸಿಂಹ ಪರ ವಕೀಲರು ಹೇಳಿದ್ದೇನು? ದಾಖಲಿಸಿರುವ ಪ್ರಕರಣಗಳೇನು?

ಹಾಸನ : ವಿಕ್ರಂ‌ಸಿಂಹ ವಿರುದ್ಧ ದಾಖಲಿಸಿರುವ ಪ್ರಕರಣಗಳು ಗಂಭೀರ ಸ್ವರೂಪದ್ದವಲ್ಲಾದ್ದರಿಂದ ನ್ಯಾಯಾಲಯ ಜಮೀನು ಮಂಜೂರು ಮಾಡಿದೆ. ಮುಂದೆ ಅವರು ನಿಗದಿತ ವಿಚಾರಣೆಗೆ ಹಾಜರಾಗುತ್ತಾರೆ ಎಂದು ವಿಕ್ರಂಸಿಂಹ ಪರ ವಕೀಲ ಚಂದ್ರೇಗೌಡ ಹೇಳಿದರು.

ಜಾಮೀನು ಮಂಜೂರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ರಂಸಿಂಹ ಅವರ ಮೇಲೆ ಫಾರೆಸ್ಟ್ ಕಾಯ್ದೆ ಅಡಿ ಸೆಕ್ಷನ್ ಹಾಕಿದ್ರು, ಅವರೆಲ್ಲವೂ ಜಾಮೀನಿನ‌ ಮೇಲೆ ಬಿಡುಗಡೆ ಹೊಂದುವ ಆರೋಪಗಳು ಆದ್ದರಿಂದ ನ್ಯಾಯಾಲಯ ಅವೆಲ್ಲವನ್ನೂ ಪರಿಗಣಿಸಿ ಜಾಮೀನು ನೀಡಿರುತ್ತದೆ.

ಇದು ಜಾಮೀನು ಪಡೆಯಬಹುದಾದ ಆರೋಪ ಆಗಿರುವುದರಿಂದ ನ್ಯಾಯಾಲಯ ಇವರಿಗೆ ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ನ್ಯಾಯಾಲಯ ಕೂಡ ಯಾವುದೇ ರೀತಿಯ ಷರತ್ತು ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.

ಪ್ರಥಮ ವರ್ತಮಾನ ವರದಿಯಲ್ಲೂ ಕೂಡ ವಿಕ್ರಂ ಅವರ ಹೆಸರು ಇರಲಿಲ್ಲ. ಆದರೂ ಶಂಕಿತ ಆರೋಪಿ ಎಂದು ಪರಿಗಣಿಸಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಅರಣ್ಯ ಸಂರಕ್ಷಣಾ ಕಾಯ್ದೆ ಕಲಂ 33(5), ಕಲಂ (80), ಕಲಂ (77 A), ಕಲಂ (77 G) ಕಲಂ 62 ಅಡಿಯಲ್ಲಿ ರೂಲ್ಸ್ 144 ಅಡಿಯಲ್ಲಿ ಕೇಸ್ ಹಾಕಿದ್ದಾರೆ.
ಇವ್ಯಾವು ಗಂಭೀರ ಶಿಕ್ಷಾರ್ಹ ಅಪರಾಧ ಅಲ್ಲ. ಹಾಗಾಗಿ ನ್ಯಾಯಾಂಗ ಬಂಧನಕ್ಕೆ ಕೊಡಲು ಕಾನೂನಿಲ್ಲಿ ಅವಕಾಶ ಇರಲಿಲ್ಲ.

ಮುಂದೆ ಕೋರ್ಟ್‌ಗೆ ಹಾಜರಾಗುತ್ತಾರೆ. ತದನಂತರ ತನಿಖೆ ಮುಂದುವರಿಯುತ್ತೆ.ಆರೋಪ ಸಾಬೀತಾಗಿಲ್ಲ ಅಂದರೆ ಯಾವುದೇ ಆರೋಪಣೆ ಹೊರಿಸದೆ ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂದರು.