ವಿಡಿಯೋ ಹಂಚಿಕೆ ಪ್ರಕರಣ; ಲಿಖಿತ್, ಚೇತನಗೆ ಜಾಮೀನು ನಿರಾಕರಿಸಿದ ಕೋರ್ಟ್

ಹಾಸನ: ಸಂಸದ ಪ್ರಜ್ವಲ್‌ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಆರೋಪದಡಿ ಬಂಧಿತರಾಗಿರುವ ಲಿಖಿತ್‌ಗೌಡ ಹಾಗೂ ಚೇತನ್‌ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಹಾಸನದ ಒಂದನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ನ್ಯಾಯಾಂಗ ಬಂಧನದಲ್ಲಿರುವ ಲಿಖಿತ್‌ಗೌಡ, ಚೇತನ್ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿತು. ಮೇ.12 ರಂದು ಲಿಖಿತ್ ಹಾಗೂ ಚೇತನ್‌ರನ್ನು ಎಸ್ಐಟಿ ಬಂಧಿಸಿತ್ತು. ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ಆರೋಪಿಗಳ ಜೈಲು ವಾಸ ಮುಂದುವರಿಯಲಿದೆ.