ಹಾಸನ: ನಗರ ಹೊರವಲಯದ, ಬಸವನಹಳ್ಳಿ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಬಾಲಕನೊಬ್ಬನ ಶವ ಪತ್ತೆಯಾಗಿದ್ದು, ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು ಮೃತದೇಹ ಎಸೆದು ಪರಾರಿಯಾಗಿದ್ದಾರೆ.
ಚಿಕ್ಕಹೊನ್ನೇನಹಳ್ಳಿಯ ವೆಂಕಟೇಶ ರೂಪ ದಂಪತಿ ಪುತ್ರ ಕುಶಾಲ್‌ಗೌಡ (12) ಮೃತ ಬಾಲಕ. ಆತ ನಿನ್ನೆ ಸಂಜೆ ಮನೆ ಬಳಿ ಆಟವಾಡಲೆಂದು ಹೋದವನು ಮನೆಗೆ ಬಾರದೇ ನಾಪತ್ತೆಯಾಗಿದ್ದ. ಪಾಲಕರು ಆತನಿಗಾಗಿ ರಾತ್ರಿಯೆಲ್ಲ ಹುಡುಕಾಟ ನಡೆಸಿದ್ದರೂ ಆತ ಪತ್ತೆಯಾಗಿರಲಿಲ್ಲ.
ಬಾಲಕನನ್ನು ಕೊಲೆಗೈದು ಪಾತಕಿಗಳು ಅಪಘಾತದಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ರೈಲ್ವೆ ಟ್ರ್ಯಾಕ್ ಬಳಿ ಶವ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.