ಮೂಕ ಬಾಲಕಿ ಮೇಲೆ ಅತ್ಯಾಚಾರ; ತಿಂಗಳ ನಂತರ ಬೆಳಕಿಗೆ ಬಂದ ಹೇಯ ಕೃತ್ಯ

ಹಾಸನ: ಜಿಲ್ಲೆಯಲ್ಲಿ ದುರುಳನೊಬ್ಬ ಕಿವುಡ ಮತ್ತು ಮೂಕ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆ ನಡೆದ ಒಂದು ತಿಂಗಳ ನಂತರ ಅಪ್ರಾಪ್ತ ಬಾಲಕಿಯ ತಂದೆ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಶ್ರವಣದೋಷವುಳ್ಳ ಕಿವುಡ ಮಕ್ಕಳ ವಸತಿ ಶಾಲೆಯೊಂದರ ಎರಡನೇ ತರಗತಿ ವಿದ್ಯಾರ್ಥಿನಿ ಸಂತ್ರಸ್ತೆಯಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಒಂದು ತಿಂಗಳ ಹಿಂದೆ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ತನ್ನ ಪೋಷಕರ ಬಳಿ ತನ್ನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳಲಾಗದೆ ನರಳಾಡಿದ್ದ ಅಪ್ರಾಪ್ತ ಬಾಲಕಿ ಆರೋಗ್ಯ ಸಮಸ್ಯೆಯಿಂದ ಬಳಲಿದ್ದಾಳೆ. ವೈದ್ಯರ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.