ಪೆನ್ ಡ್ರೈವ್ ಹಂಚಿಕೆ ಪ್ರಕರಣ: ಜೈಲಿನಿಂದ ಬಿಡುಗಡೆಯಾದ ಚೇತನ್, ಲಿಖಿತ್

ಗುರುವಾರ ಬೆಳಗ್ಗೆ ಜಾಮೀನು ಪಡೆದಿದ್ದ ಆರೋಪಿಗಳು

ಹಾಸನ : ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಬೆಳಗ್ಗೆ
ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೌಡ ಇಂದು ಸಂಜೆ ಜೈಲಿನಿಂದ ಬಿಡುಗಡೆಯಾದರು.

ಹಾಸನ ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳಾಗಿದ್ದ ಅವರನ್ನು ಜೈಲಿನ ಮುಂಬಾಗಿಲಿನಿಂದ ಹೊರಬಂದ ತಕ್ಷಣ ಪೋಷಕರು, ಸ್ನೇಹಿತರು ಪ್ರತ್ಯೇಕ ಕಾರುಗಳಿಗೆ ಹತ್ತಿಸಿಕೊಂಡರು.

ಮಾಧ್ಯಮಗಳ ಕ್ಯಾಮರಾ ದೃಷ್ಟಿಗೆ ಬೀಳುವುದನ್ನು ತಪ್ಪಿಸಿದ ಚೇತನ್ ಹಾಗೂ ಲಿಖಿತ್ ಹದಿನೆಂಟು ದಿನಗಳಿಂದ ಬಂಧನದಲ್ಲಿದ್ದರು.

ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಬಳಸಿ:

https://www.facebook.com/share/v/4kTr2fAuBatcrHCL/?mibextid=oFDknk