ಹಾಸನಾಂಬೆ ಟಿಕೆಟ್, ಪ್ರಸಾದ ಮಾರಾಟ ಆದಾಯವೇ₹5.08ಕೋಟಿ

ಹಾಸನ: ಹಾಸನಾಂಬ ಉತ್ಸವದಲ್ಲಿ ಈ ವರೆಗೆ 9. 60 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದು ₹5.08 ಕೋಟಿ ಆದಾಯ ಬಂದಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿ ಮಾಹಿತಿ ನೀಡಿದರು.

ದೇವಾಲಯದ ಆವರಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಾವಿರ ರೂಪಾಯಿಗಳ ಟಿಕೆಟ್ ಮಾರಾಟದಿಂದ 2 ಕೋಟಿ 59 ಲಕ್ಷ ಆದಾಯ ಬಂದಿದ್ದು, 300 ರೂಪಾಯಿಗಳ ಟಿಕೆಟ್ ಮಾರಾಟದಿಂದ 2 ಕೋಟಿ ರೂಪಾಯಿ ಆದಾಯ ಹಾಗೂ ಲಡ್ಡು ಪ್ರಸಾದದಿಂದ 50.ಲಕ್ಷ ರೂ. ಸೇರಿ ಒಟ್ಟು. 5 ಕೋಟಿ ರೂ.ಗೂ ಮೀರಿದ ಆದಾಯ ಈ ಬಾರಿ ಹಾಸನಾಂಬೆ ಉತ್ಸವದಿಂದ ಬಂದಿದೆ ಎಂದರು.

ಇನ್ನು ಮುಂದಿನ ಎರಡು ದಿನಗಳ ಸಾರ್ವಜನಿಕ ದರ್ಶನಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ನಿರೀಕ್ಷೆ ಇದ್ದು ಬುಧವಾರ ಸಂಪ್ರದಾಯದಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ದೇವಾಲಯದ ಗರ್ಭ ಗುಡಿಯ ಬಾಗಿಲು ಹಾಕಲಾಗುವುದು ಅಲ್ಲಿಗೆ 14 ದಿನಗಳ ಹಾಸನಾಂಬ ಉತ್ಸವಕ್ಕೆ ತೆರೆ ಬೀಳಲಿದೆ ಎಂದರು.