ಹಾಸನ: ನಗರದ ಅಧಿದೇವತೆ ಹಾಸನಾಂಬ ದೇವಾಲಯದ ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿ ವೈಭವದ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಇಂದು ಮುಂಜಾನೆ ಸಂಪನ್ನಗೊಂಡಿತು.
ಶನಿವಾರ ರಾತ್ರಿ 10 ಗಂಟೆ ಆರಂಭವಾದ ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂಜಾನೆ 5 ಗಂಟೆಗೆ ದೇವಾಲಯಕ್ಕೆ ಮರಳಿತು.
ನಂತರ ದೇವಾಲಯದ ಎದುರು ನಡೆದ ಕೊಂಡೋತ್ಸವದಲ್ಲಿ ನೂರಾರು ಭಕ್ತರು ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು. ಶಾಸಕ ಸ್ವರೂಪ್ ಪ್ರಕಾಶ್, ದೇವಾಲಯದ ಅರ್ಚಕ ಪ್ರಕಾಶ್ ಅವರೊಂದಿಗೆ ಕೆಂಡ ಹಾಯ್ದರು.