ಹಾಸನ ತಾಲೂಕು ವೀರಶೈವ ಮಹಾಸಭಾ ಪದಾಧಿಕಾರಿಗಳ ಪದಗ್ರಹಣ

ಹಾಸನ ತಾಲೂಕು ಘಟಕದ ಅಧ್ಯಕ್ಷರಾಗಿ ಕಟ್ಟಾಯ ಶಿವಕುಮಾರ್ ಪದಗ್ರಹಣ

ಹಾಸನ: ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿತು.

ಅವಿರೋಧವಾಗಿ ಆಯ್ಕೆಯಾಗಿರುವ ತಾಲೂಕು ಘಟಕದ ಪದಾಧಿಕಾರಿಗಳು, ನಿರ್ದೇಶಕರಿಗೆ ಸಹಾಯಕ ಚುನಾವಣಾಧಿಕಾರಿ ದಿವಾಕರ್ ಪ್ರಮಾಣಪತ್ರ ವಿತರಿಸಿದರು.

ಮಹಾಸಭಾ ಜಿಲ್ಲಾ ಘಟಕದ ನಿರ್ಗಮಿತ ಅಧ್ಯಕ್ಷ, ಮಾಜಿ ಶಾಸಕ ಬಿ.ಆರ್.ಗುರುದೇವ್ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಲು ಅಧ್ಯಕ್ಷ ಸ್ಥಾನದ ಜವಾಬ್ದಾರಿ ಸಿಕ್ಕಿದೆ. ಅದನ್ನು ಸಮಾಜದ ಒಳಿತಿಗಾಗಿ ಕ್ರಿಯಾಶೀಲ ಕಾರ್ಯಕ್ರಮಗಳ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಿಭಾಯಿಸುತ್ತೇನೆ ಎಂದರು.

ಕೆಎಸ್ಆರ್ಟಿಸಿ ಮಾಜಿ ಉಪಾಧ್ಯಕ್ಷ ಸೀಗೆ ಈಶ್ವರಪ್ಪ ಮಾತಾನಾಡಿದರು. ಹಾಸನ ತಣ್ಣೀರು ಹಳ್ಳ ಮಠದ ಮಠಾಧೀಶರ ಶ್ರೀ ವಿಜಯ ಕುಮಾರ್ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಹಾಸನ ಜವನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಕೊಡಗಿನ ಕಿರೇಕೋಡ್ಲಿ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ. ಸೀಗೆ ಬೆಟ್ಟದ ಮಳೆ ಮಲ್ಲೇಶ್ವರ ದೇವಾಲಯದ ಧರ್ಮದರ್ಶಿ ಶ್ರೀ ನಂದೀಶ್ವರ ಶಿವಾಚಾರ್ಯರು ವೇದಿಕೆಯಲ್ಲಿದ್ದರು.

ಮಹಾಸಭಾದ ರಾಜ್ಯ ಘಟಕದ ನಿರ್ದೇಶಕ ಬಿ.ಎಸ್. ಗುರುನಾಥ್, ಆಲೂರು ತಾಲ್ಲೂಕು ಘಟಕದ ಅಧ್ಯಕ್ಷ ಅಜಿತ್, ಯುವ ಘಟಕದ ಮಾಜಿ ಅಧ್ಯಕ್ಷ ಸಂಗಂ. ತಣ್ಣೀರು ಹಳ್ಳ ಮಠದ ಕಾರ್ಯದರ್ಶಿ ಸೋಮಣ್ಣ. ಹಾಸನ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜು, ಸಮಾಜದ ಮುಖಂಡರಾದ ಎಚ್.ಎನ್. ನಾಗೇಶ್, ಶೋಭನ ಬಾಬು, ಅವಿನಾಶ್, ಪುನೀತ್ ಪಾಟೀಲ್, ಮಾವನೂರೂ ಮೋಹನ್, ಹಂಚೂರು ಮಲ್ಲಪ್ಪ ಮತ್ತಿತರರು ಇದ್ದರು.