ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಪ್ರಾರ್ಥನೆ ದೇವರಿಗೆ ಮುಟ್ಟಿದ್ದರಿಂದ ಬಿಡುಗಡೆಯಾಗಿದ್ದೇನೆ: ಜಿ.ದೇವರಾಜೇಗೌಡ

ನನ್ನ ಬಂಧನ ಆಗಲಿದೆ ಎನ್ನುವುದು ಮೊದಲೇ ಗೊತ್ತಿತ್ತು| ಸತ್ಯ ಇಡೀ ಜಗತ್ತಿಗೆ ಗೊತ್ತಿದೆ.

ಹಾಸನ: ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ವಕೀಲರ ಪ್ರಾರ್ಥನೆ ದೇವರಿಗೆ ಮುಟ್ಟಿದೆ ಹಾಗಾಗಿ ಬಿಡುಗಡೆಯಾಗಿದ್ದೇನೆ ಎಂದು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ವಕೀಲ ಹಾಗೂ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜ್ಯ, ರಾಷ್ಟ್ರೀಯ ನಾಯಕರುಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಎಲ್ಲರೂ ನನ್ನ ಬಂಧನದ ವಿರುದ್ಧವಾಗಿ ಹೋರಾಟ ಮಾಡಿದರು. ಸತ್ಯ ಇಡೀ ಜಗತ್ತಿಗೆ ಗೊತ್ತಿದೆ. 51 ದಿನಗಳ ನಂತರ ಜೈಲಿನಿಂದ ಹೊರ ಬಂದಿದ್ದೇನೆ ಎಂದರು.

ಹಲವಾರು ಕಾರಣದಿಂದ ಕೆಲವು ವಿಚಾರಗಳನ್ನು ಬಹಿರಂಗಪಡಿಸುವುದಿಲ್ಲ. ಅದಕ್ಕಾಗಿ ಸಮಯ ನಿಗದಿಯಾಗುತ್ತದೆ. ನನ್ನ ಬಂಧನ ಆಗುತ್ತೆ ಅಂತ ನನಗೆ ಮೊದಲೇ ಗೊತ್ತಿತ್ತು ಎಂದರು.