ಹಾಸನ: ಸಂಸದ ಪ್ರಜ್ವಲ್‌ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದ ದಾಳಿ ಇನ್ನಷ್ಟು ವಿಸ್ತರಿಸಿದ್ದು ಕ್ವಾಲಿಟಿ ಬಾರ್ ಶರತ್, ಬಿಜೆಪಿ ಮುಖಂಡರಾದ ಜಿ.ದೇವರಾಜೇಗೌಡ ಹಾಗೂ ಪುನೀತ್ ನಿವಾಸಗಳ ಮೇಲೂ ಎಸ್ಐಟಿ ತಂಡ ರೇಡ್ ಮಾಡಿದೆ.
ಹಾಸನದ ವಿವೇಕ ನಗರದಲ್ಲಿರುವ ಪುನೀತ್ ನಿವಾಸ, ಗೌರಿಕೊಪ್ಪಲಿನಲ್ಲಿರುವ ಕ್ವಾಲಿಟಿ ಬಾರ್ ಶರತ್ ನಿವಾಸ, ರವೀಂದ್ರನಗರದಲ್ಲಿರುವ ಜಿ.ದೇವರಾಜೇಗೌಡ ನಿವಾಸಗಳಲ್ಲಿ ಎಸ್ಐಟಿ ತಂಡ ಸಾಕ್ಷ್ಯಗಳಿಗಾಗಿ ಹುಡುಕಾಡುತ್ತಿದೆ.
ಎಸ್ಐಟಿ ದಿಢೀರ್ ದಾಳಿಗಳು ಹಾಸನದಲ್ಲಿ ಸಂಚಲನ ಮೂಡಿಸಿದೆ.