ಭವಾನಿ ರೇವಣ್ಣಗಾಗಿ ಚೆನ್ನಾಂಬಿಕಾ ನಿವಾಸದ ಮುಂದೆ ಕಾದು ಕುಳಿತ ಎಸ್ಐಟಿ ಟೀಮ್

ಎಸ್ಐಟಿ‌ ತಂಡ ಕೂಡಿಕೊಂಡ ಮಹಿಳಾ ಅಧಿಕಾರಿ

ಹಾಸನ: ಭವಾನಿ ರೇವಣ್ಣ ಅವರ ವಿಚಾರಣೆಗಾಗಿ ಹೊಳೆನರಸೀಪುರದ ಎಚ್.ಡಿ.ರೇವಣ್ಣ ನಿವಾಸಕ್ಕೆ ಆಗಮಿಸಿರುವ ಎಸ್ಐಟಿ ಅಧಿಕಾರಿಗಳು ಭವಾನಿ ಅವರಿಗಾಗಿ ಕಾದು ಕುಳಿತಿದ್ದಾರೆ.

ಬೆಳಗ್ಗೆಯೇ ಆಗಮಿಸಿರುವ ಎಸ್ಐಟಿ ಇನ್ಸ್ ಪೆಕ್ಟರ್ ಶ್ರೀಧರ್ ಅವರನ್ನು KA-04-AF-1249 ನಂಬರ್‌ನ ಕಾರಿನಲ್ಲಿ ಆಗಮಿಸಿದ ಎಸ್‌ಐಟಿ ತಂಡದ ಮಹಿಳಾ ಅಧಿಕಾರಿ‌ ಕೂಡ ಸೇರಿಕೊಂಡಿದ್ದಾರೆ.

ತಾವೇ ಎಚ್.ಡಿ.ರೇವಣ್ಣ ನಿವಾಸದ ಗೇಟ್ ತೆಗೆದುಕೊಂಡು ಮನೆಯ ಆವರಣಕ್ಕೆ ಬಂದ ಎಸ್‌ಐಟಿ ಮಹಿಳಾ ಅಧಿಕಾರಿ ಮನೆಯ ಆವರಣದಲ್ಲಿ ಈಗಾಗಲೇ ಭವಾನಿ ಅವರಿಗೆ ಕಾಯುತ್ತಿರುವ ಇನ್ಸ್‌ಪೆಕ್ಟರ್ ಶ್ರೀಧರ್ ಅವರ ಜೀಪ್ ಏರಿ ಕುಳಿತಿದ್ದಾರೆ. ಭವಾನಿರೇವಣ್ಣ ವಿಚಾರಣೆಗೆ ಹಾಜರಾಗದಿದ್ದರೆ ಎಸ್‌ಐಟಿ ಅಧಿಕಾರಿಗಳು‌ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಕುತೂಹಲ ಮೂಡಿದೆ.