ಸೂರಜ್ ರೇವಣ್ಣ ವಿರುದ್ಧವೇ ದೂರು ನೀಡಲು‌ ಪೊಲೀಸ್ ಠಾಣೆಗೆ ಬಂದ ಆಪ್ತ ; ಕುತೂಹಲ ಮೂಡಿಸಿದ ಯುವಕನ ನಡೆ

ಹಾಸನ : ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ವಿರುದ್ಧವೇ ದೂರು ನೀಡಲು ಅವರ ಆಪ್ತ, ಲೈಂಗಿಕ ದೌರ್ಜನ್ಯ ಪ್ರಕರಣದ ಎರಡನೇ ಆರೋಪಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ.

ಹೊಳೆನರಸೀಪುರ ತಾಲ್ಲೂಕಿನ, ನಿವಾಸಿಯಾ ಯುವಕ, ಸಂತ್ರಸ್ತ‌ ಯುವಕ, ಸೂರಜ್ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದನು.

ಇದೀಗ ಸೂರಜ್‌ರೇವಣ್ಣ ವಿರುದ್ಧವೇ ಆತ ದೂರು ನೀಡಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದ್ದು, ಏನು ಆರೋಪ ಹೊರಿಸಲಿದ್ದಾನೆ ಎನ್ನುವುದು ಕುತೂಹಲ ಮೂಡಿಸಿದೆ.