ಹಾಸನ: ಕಿರಣ್ ರೆಡ್ಡಿ ಎಂಬವರಿಗೆ ಬಲವಂತವಾಗಿ ಜಮೀನು ಮಾರಾಟ ಮಾಡಿಸಿದ ಆರೋಪ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಅವರ ಪತ್ನಿ ಶಿಲ್ಪಾ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಅವರಿಗೆ ಲಿಖಿತ ದೂರು ಸಲ್ಲಿಸಿದರು.
ತಮ್ಮ ವಕೀಲ, ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಅವರೊಂದಿಗೆ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿದ ಅವರು ದೂರು ಸಲ್ಲಿಸಿ, ಪ್ರಜ್ವಲ್ ಹಾಗೂ ಭವಾನಿ ರೇವಣ್ಣ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ದೂರಿನ ಪೂರ್ಣಪಾಠ ಇಂತಿದೆ:
ಇವರಿಗೆ,
- ಪೋಲೀಸ್ ವರಿಷ್ಠಾಧಿಕಾರಿಗಳು
ಹಾಸನ ಜಿಲ್ಲೆ
ಇಂದ,
ಶ್ರೀಮತಿ ಶಿಲ್ಪಾ ಎಮ್ ಕೋಂ ಕಾರ್ತಿಕ್ ಎನ್. ಕಡವಿನಕೋಟೆ ಗ್ರಾಮ, ಹಳೇಕೋಟೆ ಹೋಬಳಿ ಹೊಳೇನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ 573211 9620226957.
ವಿಷಯ:- ಹಾಸನ ಲೋಕಸಭಾ ಸದಸ್ಯರಾದ ಶ್ರೀ ಪ್ರಜ್ವಲ್ ರೇವಣ್ಣ ಹಾಗೂ ಆತನ ತಾಯಿ ಶ್ರೀಮತಿ ಭವಾನಿ ರೇವಣ್ಣ ಮತ್ತು ಆತನ ತಂದೆ ಶ್ರೀ ಹೆಚ್.ಡಿ. ರೇವಣ್ಣ ಹಾಲಿ ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಅವರ ಆಪ್ತ ಸಹಾಯಕನಾದ ರವಿಕುಮಾರ ಪಿ. ಮತ್ತು ಹೊಳೇನರಸೀಪುರ ಗ್ರಾಮಾಂತರ ಪೋಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ವಿನಯ್ ಕುಮಾರ, ಸ್ಥಳೀಯ ಅಜಿತ್ ಮತ್ತು ಇನ್ಸಪೆಕ್ಟರ್ ದೀಪಕ್ ಇವರುಗಳ ವಿರುದ್ದ ಅಪಹರಣ, ಹಲ್ಲೆ, ಕೊಲೆಬೆದರಿಕೆ, ಭ್ರೂಣ ಹತ್ಯೆ. ಗೂಂಡಾಗಿರಿ, ಅತಿಕ್ರಮ ಪ್ರವೇಶ ಹಾಗೂ ವಂಚನೆ ಮತ್ತು ನಂಬಿಕೆ ದ್ರೋಹ ಇಂತಹ ಗಂಭೀರ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಬಂದನ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿರುವ ದೂರು ಅರ್ಜಿ.
ಮಾನ್ಯರೆ:
ಹೊಳೆನರಸೀಪುರ ಗ್ರಾಮಾಂತರ ಪೋಲೀಸ್ ಠಾಣೆಯ ಸಬ್-ಇನ್ಸಪೆಕ್ಟರ್ ವಿನಯ್ ಕುಮಾರ್ ಮತ್ತು ಅಜಿತ್ ರವರು ದಿನಾಂಕ:-12/03/2023 ರಂದು ರಾತ್ರಿ 11:30 ಗಂಟೆ ಸಮಯದಲ್ಲಿ ಖಾಸಗಿ ಕಾರಿನಲ್ಲಿ ( ಕಾರಿನ ಸಂಖ್ಯೆ ಕೆ.ಎ 09.ಎಮ್.ಜಿ 1675 ) ನಮ್ಮ ಮನೆಗೆ ಬಂದು ಅತಿಕ್ರಮ ಪ್ರವೇಶ ಮಾಡಿ ಏಕಾಏಕಿ ಮನೆಯೊಳಗೆ ನುಗ್ಗಿ ನಿನ್ನ ಗಂಡ ರೇವಣ್ಣ ಸಾಹೇಬರ ಮನೆಯಲ್ಲಿದ್ದಾನೆ ಬಂದು ಗಾಡಿ ಹತ್ತು ಎಂದು ಏರುಧ್ವನಿಯಲ್ಲಿ ನನಗೆ ಹೇಳುತ್ತಾರೆ, ಅದಕ್ಕೆ ನಾನು ಈ 11:30 ರ ನಡು ರಾತ್ರಿಯಲ್ಲಿ ನಾನೊಬ್ಬಳೆ ಬರುವುದಿಲ್ಲ ಮನೆಯಲ್ಲಿ ನಮ್ಮ ಅತ್ತೆ-ಮಾವ ಇದ್ದಾರೆ ಅವರನ್ನು ಜೊತೆಗೆ ಕರೆದುಕೊಂಡು ನಮ್ಮ ಕಾರಿನಲ್ಲಿ ನಮ್ಮ ಡ್ರೈವರೊಂದಿಗೆ ಬರುತ್ತೇನೆಂದು ಹೇಳಿದಾಗ ಆಗ ವಿನಯ್ ಕುಮಾರ್ ರವರು ಆಶ್ಲೀಲ ಪದ ಬಳಕೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಬಂದು ನಮ್ಮ ಕಾರು ಹತ್ತು ಇಲ್ಲದಿದ್ದರೆ ನಿನ್ನ ಬಟ್ಟೆ ಬಿಚ್ಚಿ ಹೊಡೆದು ಎಳೆದುಕೊಂಡು ಹೋಗ ಬೇಕಾಗುತ್ತದೆ ಎಂದು ಬೆದರಿಸಿರುತ್ತಾನೆ. ಆಗ ನಾನು ಅನ್ಯ
ಮಾರ್ಗವಿಲ್ಲದೆ ನಡು ರಾತ್ರಿಯಲ್ಲಿಯೇ ರೇವಣ್ಣ ರವರ ಮನೆಗೆ ಅವರ ಕಾರಿನಲ್ಲಿ ಹೊದೆನು ಆಗ ಅವರ ಹೊಳೇನರಸೀಪುರ ಚೆನ್ನಾಂಬಿಕಾ ಚಿತ್ರಮಂದಿರದ ಪಕ್ಕದ ಅವರ ಮೆನೆಯಲ್ಲಿ ನನ್ನ ಗಂಡನಿಗೆ ಕೂಡಿ ಹಾಕಿಕೊಂಡು ಚಿತ್ರಹಿಂಸೆ ನೀಡಿ ದೈಹಿಕ ಹಲ್ಲೆ ನಡೆಸಿ ಮನೆಯ ಒಳ ಅಂಗಳದಲ್ಲಿ ನಿಲ್ಲಿಸಿದ್ದರು. ಆಗ ನನ್ನನ್ನು ನೋಡಿ ನನ್ನ ಗಂಡನು ಅಳುತ್ತಾ ನೀನು ಏಕೆ ಇಲ್ಲಿಗೆ ಮತ್ತು ಈ ಪಾಪದ ಜಾಗಕ್ಕೆ ಬಂದೆ ಎಂದು ಹೇಳಿದರು ಇದನ್ನು ಕೇಳಿದ ಸಂಸದ ಪ್ರಜ್ವಲ್ ರೇವಣ್ಣ ನನ್ನ ಗಂಡನ ಎದೆಗೆ ಒದ್ದನು ಆಗ ನಾನು ಅಳುತ್ತಾ ಏಕೆ ಈ ರೀತಿ ನನ್ನ ಗಂಡನಿಗೆ ಚಿತ್ರ ಹಿಂಸೆ ನೀಡುತ್ತಿದ್ದೀರಾ ? ನಿಮಗೆ ಏನು ಬೇಕು ಎಂದು ಕೇಳಿದೆ ಅದಕ್ಕೆ ಶ್ರೀಮತಿ ಭವಾನಿ ರೇವಣ್ಣರವರು ಬಾಯಿಗೆ ಬಂದಂತೆ ಬೈಯ್ದು ಮೂರು ತಿಂಗಳ ಗರ್ಭವತಿಯಾದ ನನ್ನ ಹೊಟ್ಟೆಗೆ ಬಲವಾಗಿ ಬಲಗಾಲಿಂದ ಹೊದ್ದು ತೀವ್ರವಾದ ನೊಂವುಂಟು ಮಾಡಿದಳು ಆಗ ನಾನು ನೋವಿನಿಂದ ಪ್ರಜ್ಞಾಹೀನಳಾಗಿ ಕುಸಿದುಬಿದ್ದೆನು. ಸ್ವಲ್ಪ ಸಮಯದ ನಂತರ ಎಚ್ಚರವಾಗಿ ನೋಡಿದಾಗ ನನ್ನ ಗುಪ್ತಾಂಗದಲ್ಲಿ ರಕ್ತ ಸ್ರಾವವಾಗಿರುತ್ತದೆ ಹಾಗೂ ನನ್ನ ಕಪಾಳಕ್ಕೆ ಶ್ರೀ ಪ್ರಜ್ವಲ್ ರೇವಣ್ಣ ಬಲವಾಗಿ ಹೊಡೆದುದ್ದರಿಂದ ನನ್ನ ಮುಖದ ಬಾಗವು ನೋವಿನಿಂದ ಊದಿಕೊಂಡಿತ್ತು, ನಂತರ ಶ್ರೀಮತಿ ಭವಾನಿ ರೇವಣ್ಣ ನನಗೆ ನಿನ್ನ ಗಂಡನಿಂದ 13.ಎಕರೆ 20 ಗುಂಟೆ ಆಸ್ತಿಯನ್ನು ನಾವು ಹೇಳಿದವರಿಗೆ ಬರೆದುಕೊಡಲು ಹೇಳು ಇಲ್ಲದಿದ್ದರೆ ನಿನ್ನ ಗಂಡನ ಜೊತೆ ನಿಮ್ಮನ್ನು ಕೊಲ್ಲಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು ಹಾಗೂ ಈ ವಿಚಾರವಾಗಿ ಈ ಮನೆಯಿಂದ ಹೊರಗೆ ಎಲ್ಲಿಯಾದರೂ ಬಾಯಿ ಬಿಟ್ಟರೆ ನಿಮ್ಮ ವಂಶವನ್ನೆ ಸುಟ್ಟು ಹಾಕುತ್ತೇವೆ ನಮ್ಮ ಯಾವ ರೀತಿಯಲ್ಲಿ ಬಲಿಷ್ಠವಾದ ಕುಟುಂಬ ಗೊತ್ತಾ ? ಎಂದು ಕೊಲೆ ಬೆದರಿಕೆ ಹಾಕಿದರು ನಂತರ ಹೆಚ್.ಡಿ ರೇವಣ್ಣನವರು ನನಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ತಲೆಯ ಕೂದಲನ್ನು ಇಡಿದು ಎಳೆದಾಡಿ ಕಪಾಳಕ್ಕೆ ಒಡೆದು ನಿನ್ನ ಗಂಡನಿಂದ ಆಸ್ತಿಯನ್ನು ಬರೆಸಿಕೊಡು ಎಂದು ಹೇಳಿದರು. ಇಷ್ಟೆಲ್ಲಾ ದುರ್ಗಟನೆ ನಡೆದರೂ ನೊಂದವರಿಗೆ ರಕ್ಷಣೆ ಕೊಡಬೇಕಾದ ಪೋಲೀಸ್ ಸಬ್ ಇನ್ಸಪೆಕ್ಟರ್ ಆದ ದೀಪಕ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಅಂದರೆ ಪರೋಕ್ಷವಾಗಿ ಈ ಕೃತ್ಯಕ್ಕೆ ಸಹಕರಿಸಿರುತ್ತಾರೆ. ಇದಾದ ನಂತರ ನಾವು ಅಸ್ತಿಯನ್ನು ಬರೆದುಕೊಡಲು ಒಪ್ಪದಿದ್ದಾಗ ಸುಮಾರು ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ನನ್ನ ಮತ್ತು ನನ್ನ ಗಂಡನನ್ನು ಹೊಳೆನರಸೀಪುರ ಹೇಮಾವತಿ ನದಿಯ ದಡದಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿರುವ ಕೊಠಡಿ ಸಂಖ್ಯೆ. 08 ರಲ್ಲಿ ಕೂಡಿಹಾಕಿ ಆ ಸ್ಥಳದಲ್ಲಿ ಶಸ್ತ್ರ ಸಜ್ಜಿತರಾದ ಮೂರು ಜನ ಪೋಲೀಸ್ ಸಿಬ್ಬಂದಿಗಳನ್ನು ನೇಮಿಸಿ ನಾವು ಕಿರುಚಾಡದಂತೆ / ಯಾರನ್ನು ಸಹಾಯಕ್ಕೆ ಕರೆಯದಂತೆ ನೋಡಿಕೊಳ್ಳುಲು ನೇಮಿಸಿದ್ದರು ಅದಾದ ಮರು ದಿವಸ ನನ್ನ ಗಂಡನಿಂದ ಆಸ್ತಿಯನ್ನು ನೊಂದಣಿ ಮಾಡಿಕೊಂಡು ನೊಂದಣೆಯಲ್ಲಿ ತೋರಿಸಿಕೊಂಡಿದ್ದ ಹಣವನ್ನು ನನ್ನ ಗಂಡನಿಂದ ಡ್ರಾ ಮಾಡಿಸಿಕೊಂಡಿರುತ್ತಾರೆ ಈ ವಿಚಾರವಾಗಿ ನಾವು ಪೋಲೀಸ್ ಠಾಣೆಗೆ ದೂರು ನೀಡಲು ಹೋದರೆ ಸ್ಥಳೀಯ ಪೋಲೀಸರೆ ಆರೋಪಿಗಳಾಗಿರುವ ಕಾರಣ ನಗರ ಪೋಲೀಸ್ ಠಾಣೆಯವರು ನಮ್ಮ ದೂರು ಸ್ವೀಕರಿಸುವುದಿರುವುದಿಲ್ಲ. ಈ ವಿಚಾರವಾಗಿ ನನ್ನ ಪತಿಯು ದಿನಾಂಕ 04.12.2023 ರಂದು ತಮಗೆ ನೊಂದಣಿ ಅಂಚೆ ಮೂಲಕ ದೂರು ನೀಡಲಾಗಿತ್ತು ಆದರೆ ಆ ದೂರನ್ನು ನನ್ನ ಪತಿಯವರು ನೀಡಿರುವ ಕಾರಣ ನನ್ನ ಗರ್ಭಪಾತಕ್ಕೆ ಹಾಗೂ
ಹಲ್ಲೆಗೊಳಗಾದ ನೊಂದ ಮಹಿಳೆಯಾದ ನಾನೇ ದೂರು ನೀಡಬೇಕೆಂಬ ಕಾರಣದಿಂದ ಈ ದಿವಸ ಸ್ವಯಾರ್ಜಿತವಾಗಿ ನಾನೇ ದೂರು ಅರ್ಜಿಯನ್ನು ನೀಡುತ್ತಿದ್ದೇನೆ,
ಆದಕಾರಣ ಹಾಸನ ಲೋಕಸಭಾ ಸದಸ್ಯರಾದ ಶ್ರೀ ಪ್ರಜ್ವಲ್ ರೇವಣ್ಣ ಹಾಗೂ ಆತನ ತಾಯಿ ಶ್ರೀಮತಿ ಭವಾನಿ ರೇವಣ್ಣ ಮತ್ತು ಆತನ ತಂದೆ ಶ್ರೀ ಹೆಚ್.ಡಿ. ರೇವಣ್ಣ ಹಾಲಿ ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಅವರ ಆಪ್ತ ಸಹಾಯಕನಾದ ರವಿ ಕುಮಾರ ಪಿ. ಮತ್ತು ಹೊಳೇನರಸೀಪುರ ಗ್ರಾಮಾಂತರ ಪೋಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಆದ ಪ್ರಮುಖ ಆರೋಪಿ ವಿನಯ್ ಕುಮಾರ, ಸ್ಥಳೀಯನಾದ ಅಜಿತ್ ಮತ್ತು ಅಂದಿನ ಪೋಲೀಸ್ ಇನ್ಸಪೆಕ್ಟರ್ ದೀಪಕ್ ಇವರುಗಳ ವಿರುದ್ಧ ಅಪಹರಣ, ಹಲ್ಲೆ, ಕೊಲೆ ಬೆದರಿಕೆ, ಭ್ರೂಣ ಹತ್ಯೆ ಗೂಂಡಾಗಿರಿ, ಅತಿಕ್ರಮ ಪ್ರದೇಶ ಹಾಗೂ ವಂಚನೆ ಮತ್ತು ನಂಬಿಕೆ ದ್ರೋಹ ಇಂತಹ ಗಂಭೀರ ಕೃತ್ಯವಾಗಿರುವುದರಿಂದ ಭಾರತ ದಂಡಸಂಹಿತೆ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಆರೋಪಿತರನ್ನು ಬಂಧನ ಮಾಡಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.
ಸ್ಥಳ: ಹಾಸನ
ಇಂತಿ ನೊಂದ ಮಹಿಳೆ
Shilpa M