ಮನೆಹಾಳು ಐಡಿಯಾ ಕೊಡುವ ಧಾರಾವಾಹಿಗಳ ಬದಲು ಪುಸ್ತಕ ಓದಿ; ಸಾಹಿತಿ ಶೈಲಜಾ ಹಾಸನ್

ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರಬೇಕು

ಹಾಸನ :ಮನೆಹಾಳು ಐಡಿಯಾ ಕೊಡುವ ಧಾರವಾಹಿ ನೋಡುವ ಬದಲು ಕನ್ನಡಲ್ಲಿ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಿ ಎಂದು ಹಿರಿಯ ಸಾಹಿತಿ ಶೈಲಜಾ ಹಾಸನ್ ಹೇಳಿದರು.

ಭಾನುವಾರ ಸಂಜೆ ಹಾಸನದ ಆದಿಚುಂಚನಗಿರಿ ಒಕ್ಕಲಿಗರ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಅಂತರರಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಟಿವಿ, ಶೋಷಿಯಲ್ ಮೀಡಿಯಾನೇ ಬದುಕಿನ ಮುಖ್ಯ ಅಂಶವಾಗಬಾರದು, ಕನ್ನಡಲ್ಲಿ ಅತ್ಯುತ್ತಮವಾದ ಬರಹಗಾರರು ಇದ್ದಾರೆ ಅವರ ಪುಸ್ತಗಳನ್ನು ಓದುವುದರಿಂದ ಉತ್ತಮ ಜೀವನವನ್ನು ರೂಢಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಪ್ರಸ್ತುತ ಹಿಂದಿನಂತೆ ಹೆಚ್ಚು ಮಹಿಳಾ ಶೋಷಣೆ ಇಲ್ಲದಿದ್ದರೂ ಈಗಲೂ ನಾವು ನಮ್ಮ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರಬೇಕು, ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸಿದೆ ಆಕೆ ಕಿರುಕುಳ ಅನುಭವಿಸಿದ್ದು ಗೊತ್ತಾದ್ರೆ ಮತ್ತೆ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತ ಶಕ್ತಿಯನ್ನು ತಾಯಂದಿರು ತುಂಬಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮಾಜಮುಖಿ ಸೇವೆಗಾಗಿ ಡಾ. ಹೇಮಲತಾ ಮತ್ತು ಕಿರಿಯ ವಯ್ಸುಸಿನಲ್ಲೇ ಕ್ರೀಡಾಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಚೆಸ್ ಆಟಗಾರ್ತಿ ಕು.ಆದ್ಯ ಅವರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ಭಾರತಿ ರಾಜಶೇಖರ್, ಉಪಾಧ್ಯಕ್ಷರಾದ ಶ್ರೀಮತಿ ಮಂಗಳ ಚಂದ್ರೇಗೌಡ, ಕಾರ್ಯದರ್ಶಿ ಶ್ರೀಮತಿ ಕಲಾ ನರಸಿಂಹ ಇದ್ದರು,
ಮೊದಲಿಗೆ ಶ್ರೀಮತಿ ಪುಷ್ಪ ಗಿರೀಶ್ ಮತ್ತು ತಂಡ ಪ್ರಾರ್ಥಿಸಿದರು.
ಶ್ರೀಮತಿ ವಾಣಿ ನಾಗೇಶ್, ಕಾರ್ಯಕ್ರಮ ನಿರೂಪಿಸಿದರು.