ಈ ಫೋಟೋ ತೆಗೆದು ರೇವಣ್ಣಂಗೆ ಕಳಿಸೋಕೆ ಹೇಳ್ತೀನಿ; ಶಾಸಕ ಸ್ವರೂಪ್ ಪ್ರಕಾಶ್ ಗೆ ಸಚಿವ ರಾಜಣ್ಣ ಹೀಗೆ ಹೇಳಿದ್ದೇಕೆ?

ಹಾಸನ; ಹಾಸನಾಂಬ ಉತ್ಸವದ ಸಿದ್ಧತೆ ಪರಿಶೀಲನೆ ಬಳಿಕ ದೇವಾಲಯದ ಮುಖ್ಯದ್ವಾರದ ಬಳಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಫೋಟೋಗೆ ಫೋಸ್ ನೀಡಿದಾಗ ಸಂಸದ ಶ್ರೇಯಸ್‌ಪಟೇಲ್ ಹಾಗೂ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಅವರು ಪರಸ್ಪರ ಕೈ ಹಿಡಿದು ನಿಂತಿದ್ದನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಸ್ಯ ಚಟಾಕಿ ಹಾರಿಸಿದರು.

ಕಾಂಗ್ರೆಸ್ ನ ಸಂಸದ ಹಾಗೂ ಜೆಡಿಎಸ್ ನ ಶಾಸಕ ಕೈಕೈ ಹಿಡಿದು ನಿಂತಿದ್ದನ್ನು ಕಂಡ ರಾಜಣ್ಣ, ಈ ಫೋಟೋ ತೆಗೆದು ರೇವಣ್ಣಂಗೆ ಕಳಿಸೋದಕ್ಕೆ ಹೇಳ್ತೀನಿ, ಇದೇ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಅಪ್‌ಲೋಡ್ ಮಾಡಲು ಹೇಳ್ತಿನಿ ಎಂದು ಕಾಲೆಳೆದರು.

ಅಲ್ಲದೇ, ಕೈ ಕೈ ಹಿಡಿದು ನಿಂತಿರೋದನ್ನ ರೇವಣ್ಣ ನೋಡಲಿ ಫೋಟೋ ಕಳುಸ್ತಿನಿ ಎಂದು ತಮಾಷೆ ಮಾಡಿದರು.

ಕಾರ್ಯಕ್ರಮಗಳಲ್ಲಿ ಜತೆಯಾಗಿ ಪಾಲ್ಗೊಳ್ತಿವಿ ಎಂದ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಸಮಜಾಯಿಷಿ ನೀಡಿದರೆ, ಸಚಿವರ ಹಾಸ್ಯಕ್ಕೆ ಸಂಸದ ಶ್ರೇಯಸ್, ನಗುತ್ತ ನಿಂತರು. ನಂತರ ಕೈ ಕೈ ಹಿಡಿದುಕೊಂಡೇ ಸಂಸದ ಶಾಸಕ ಅಲ್ಲಿಂದ ತೆರಳಿದರು.