ಕಾಡುಕೋಣ ಸಂಚಾರದ ಸ್ಥಳಕ್ಕೆ ಆರ್.ಎಫ್.ಒ. ಹೇಮಂತ್ ಭೇಟಿ; ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮದ ಭರವಸೆ ನೀಡಿದ ಅಧಿಕಾರಿ

ಹಾಸನ: ಸಕಲೇಶಪುರ ತಾಲೂಕಿನಲ್ಲಿ ಕಾಡುಕೋಣ ಜನವಸತಿ ಪ್ರದೇಶದಲ್ಲಿ ಓಡಾಡಿ ಆತಂಕ ಸೃಷ್ಟಿಸಿದ್ದ ಸ್ಥಳಕ್ಕೆ ಸಕಲೇಶಪುರ ಆರ್‌.ಎಫ್.ಒ. ಹೇಮಂತ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹೊಂಬಾಳೆ ಹೋಂಸ್ಟೇ ಗೆ ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಅವರು ಕಾಡುಕೋಣದ ಓಡಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಮೂಡಿಗೆರೆ ತಾಲೂಕಿನ ಗಡಿಭಾಗದಲ್ಲಿರುವ ಕಾಡಿನಿಂದ ಕೋಣ ಇಲ್ಲಿಗೆ ಬಂದಿದೆ. ಸ್ಥಳೀಯರು ಅದಕ್ಕೆ ದೃಷ್ಟಿದೋಷವಿದೆ ಎಂದು ಹೇಳಿದ್ದಾರೆ. ಈ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ.

ಸದ್ಯ ಕಾಡುಕೋಣ ಇಲ್ಲಿಂದ ತೆರಳಿದೆ. ಅದರ ಚಲನವಲನ ಗುರುತಿಸಿ ಚಿಕಿತ್ಸೆಯ ಅಗತ್ಯವಿದ್ದರೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಆರ್.ಎಫ್.ಒ. ಎಚ್.ಆರ್.ಹೇಮಂತ್ ‘ಕನ್ನಡಪೋಸ್ಟ್’ ಗೆ ತಿಳಿಸಿದರು.

ಅರಣ್ಯ ಗಸ್ತು ಸಿಬ್ಬಂದಿ ಚನ್ನಪ್ಪ ದಾಸರ ಮುಂತಾದವರಿದ್ದರು.