ಸಕಲೇಶಪುರ: ಗೋ ಸಾಗಣೆ ವಾಹನ ತಡೆದ ಹಿಂದು ರಕ್ಷಣಾ ವೇದಿಕೆ ಕಾರ್ಯಕರ್ತರು-ವಾಹನ ಪೊಲೀಸ್ ವಶಕ್ಕೆ

ಸಕಲೇಶಪುರ: ಪಟ್ಟಣ ಹೊರವಲಯದಲ್ಲಿ ಜಾನುವಾರು ಸಾಗಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ದೋಸ್ತ್ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳ್ಳಂಬೆಳಗ್ಗೆ  ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾನುಬಾಳು ಕಡೆಯಿಂದ  ಬರುತ್ತಿದ್ದ KA42 B 4431 ನೋಂದಣಿ‌ ಸಂಖ್ಯೆಯ ಅಶೋಕ್ ಲೇಲ್ಯಾಂಡ್ ವಾಹನವನ್ನು ಬೆನ್ನಟ್ಟಿ ನಗರ ಠಾಣೆಯ ವ್ಯಾಪ್ತಿಯ ಕೆಂಪೆಗೌಡ ಪುತಿಮೆ ವೃತ್ತದ ಬಳಿ  ತಡೆಯಲು ಯಶಸ್ವಿಯಾಗಿದರು.

ವಾಹನದಲ್ಲಿ ಜಾನುವಾರುಗಳಿಗೆ ಸರಿಯಾಗಿ ನಿಲ್ಲಲ್ಲು ಆಗದಂತೆ 6 ಗೋವುಗಳನ್ನು ಅಕ್ರಮವಾಗಿ ತುಂಬಲಾಗಿತ್ತು. ಈ ಬಗ್ಗೆ ಕಾರ್ಯಯಕರ್ತರು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಶೋಕ್ ಲೆಯ್ಲಂಡ್ ವಾಹನವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.