ಸಕಲೇಶಪುರ: ಶಾಲಾ ಸಿಬ್ಬಂದಿ, ಶಿಕ್ಷಕರ ಮೇಲೆ ಹೆಜ್ಜೇನು ದಾಳಿ 9 ಜನರು ಅಸ್ವಸ್ಥ

ಸಕಲೇಶಪುರ: ಪಟ್ಟಣದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿಗಳು ಶುಕ್ರವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಹಿಂತಿರುಗುವ ಸಂದರ್ಭ ಅಚಾನಕ್ ಹೆಜ್ಜೇನುಗಳ ದಾಳಿಗೆ ಒಳಗಾದ ಘಟನೆ ನಡೆದಿದೆ.

ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಶಾಲೆಯಿಂದ ಹೊರಟಾಗ, ಹೆಜ್ಜೇನುಗಳು ದಾಳಿ ಮಾಡಿದ್ದು, ಒಟ್ಟು 9 ಮಂದಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ತಕ್ಷಣವೇ ಪಟ್ಟಣದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿ

 ಭಾಸ್ಕರ್, ಕೋಮಲ, ಸೋಮಶೇಖರ್, ರವಿ, ಚೈತನ್ಯ, ಸಂಜಯ್, ಅಕ್ಷಯ್, ವಿಶ್ವನಾಥ್ ಮತ್ತು ವರ್ಗಿಸ್ ಅವರಿಗೆ ಜೇನುಹುಳುಗಳು ಕಡಿದಿದ್ದು, ಇವರಲ್ಲಿ ಕೋಮಲ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.