ಪುತ್ರನ‌‌ ಪರ‌ ಪ್ರಚಾರದ ಅಖಾಡಕ್ಕಿಳಿದರು ಭವಾನಿ ರೇವಣ್ಣ

ವಕೀಲರ ಸಂಘದಲ್ಲಿ ಮತ ಯಾಚಿಸಿದ ಭವಾನಿ, ರೇವಣ್ಣ, ಸ್ವರೂಪವಾಗಿದೆ

ಹಾಸನ: ಅನಾರೋಗ್ಯದ ಕಾರಣಕ್ಕಾಗಿ ರಾಜಕೀಯ ವೇದಿಕೆಗಳಿಂದ ದೂರವಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಪತ್ನಿ ಭವಾನಿ ಮಂಗಳವಾರ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಪುತ್ರ ಪ್ರಜ್ವಲ್ ಪರ ಅಖಾಡಕ್ಕಿಳಿದರು.

ಹಾಸನ ನಗರದ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿದ ಅವರು ಮಗ, ಸಂಸದ ಪ್ರಜ್ವಲ್‌ರೇವಣ್ಣ ಪರ ಮತಯಾಚನೆ ಮಾಡಿದರು.

ಮಾಜಿಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್‌ರೇವಣ್ಣ, ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಅವರು ಸಾಥ್ ನೀಡಿದರು.

ಪ್ರಜ್ವಲ್ ಸ್ಪರ್ಧೆ ಗೆ ಬಿಜೆಪಿ ಮುಖಂಡರ ವಿರೋಧದ ನಡುವೆಯೂ ಜೆಡಿಎಸ್‌‌ನಿಂದ ಭರ್ಜರಿ ಕ್ಯಾಂಪೇನ್ ನಡೆಯುತ್ತಿದೆ. ಪ್ರಜ್ವಲ್ ಅವರು ಎನ್‌ಡಿಎ ಅಭ್ಯರ್ಥಿ ಎಂದು ಅಧಿಕೃತ ಘೋಷಣೆ ಮಾಡದಿದ್ದರೂ ಪ್ರಚಾರ ಮುಂದುವರೆಸಿರುವುದು ವಿಶೇಷವಾಗಿದೆ.