ಎ.ಟಿ.ರಾಮಸ್ವಾಮಿ ಪಾಪ, ಬಹಳ ತತ್ವಾಧರಿತ ನಡವಳಿಕೆಯಲ್ಲಿ ಬಂದ ಗೌರವಾನ್ವಿತ ವ್ಯಕ್ತಿ ಎಂದು ಕಟಕಿಯಾಡಿದ ಕುಮಾರಸ್ವಾಮಿ

ನಮ್ಮ ಕುಟುಂಬದ ಬೇನಾಮಿ ಆಸ್ತಿ ಇದ್ದರೆ, ತಪ್ಪು ನಡೆದಿದ್ದರೆ ತನಿಖೆ ನಡೆಸಿ; ಕುಮಾರಸ್ವಾಮಿ ಸವಾಲು

ಹಾಸನ : ನಗರದಲ್ಲಿ ಇಂದು ಮಾಜಿ ಸಚಿವ ಎಚ್.ಡಿ.ರೆವಣ್ಣ ಕುಟುಂಬದ ವಿರುದ್ದ ನಡೆದ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ನಮ್ಮ ಕುಟುಂಬದ ಬೇನಾಮಿ ಆಸ್ತಿ ಬಗ್ಗೆ ದಾಖಲೆ ಇದ್ದರೆ ಸಂಬಂಧಪಟ್ಟ ಇಲಾಖೆಗೆ ಕೊಟ್ಟು ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ನಡೆದ ಹೋರಾಟದ ಬಗ್ಗೆ ಅಸಮಾಧಾನ ಹೊರಹಾಕಿದ ಅವರು, ಆ ರೀತಿ ಏನಾದರೂ ತಪ್ಪು ನಡೆದಿದ್ದರೆ ಯಾವುದೇ ರೀತಿಯ ತನಿಖೆ ನಡೆಸಲಿ, ನಾನೂ ತನಿಖೆಗೆ ಸರ್ಕಾರವನ್ನು ಒತ್ತಾಯ ಮಾಡ್ತಿನಿ ಎಂದರು.

ಎ.ಟಿ.ರಾಮಸ್ವಾಮಿ ಅವರು ಪಾಪ, ಬಹಳ ತತ್ವಾಧರಿತ ನಡವಳಿಕೆಯಲ್ಲಿ ಬಂದ ಗೌರವಾನ್ವಿತ ವ್ಯಕ್ತಿ ಎಂದು ಬಿಜೆಪಿ ನಾಯಕ ರಾಮಸ್ವಾಮಿ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

ಪಾಪ ಅವರ ಒತ್ತಾಯ ಏನಿದೆಯೋ ಅದರಂತೆ ರೇವಣ್ಣ ಕುಟುಂಬದ ಬಗ್ಗೆ ಸರ್ಕಾರ ತನಿಖೆ ನಡೆಸಲಿ. ವಾಸ್ತವಾಂಶ ಏನಿದೆ ತಿಳಿಸಲಿ ಎಂದರು.

ರೇವಣ್ಣ ಕುಟುಂಬದಿಂದ ತಪ್ಪಾಗಿದ್ದರೆ ಏನು ಕ್ರಮ ಬೇಕೊ ತಗೊಳ್ಳಿ. ಅದು ಬಿಟ್ಟು ರಾಜಕೀಯವಾಗಿ ಕೆಲವರ ಹಿನ್ನೆಲೆ ಏನಿದೆ ಎನ್ನುವುದನ್ನು‌ ನಾನ್ಯಾಕೆ ಹೇಳಲಿ?ಸರ್ಕಾರವೇ ತನಿಖೆ ಮಾಡಿಸಿ ಸತ್ಯಾಂಶ ಹೊರಗಿಡಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ನವರಿಗೆ ಬೇರೆ ವಿಚಾರ ಇಲ್ಲ ಲ, ಹಾಗಾಗಿ ಇಂತಹ ಕಥೆ ಹುಟ್ಟು ಹಾಕಿದ್ದಾರೆ.
ಈಗ ಆರೋಪ ಮಾಡ್ತಿರುವ ವ್ಯಕ್ತಿ ಆಗ ಅಸೆಂಬ್ಲಿ ಚುನಾವಣೆ ವೇಳೆಯಲ್ಲಿ ಯಾಕೆ ಹೇಳಲಿಲ್ಲ? ಇಷ್ಟು ದಿನ ಯಾಕೆ ಸುಮ್ಮನಿದ್ದ?

ಮಾಧ್ಯಮದ ಮುಂದೆ ಹೋಗಲು ತಡೆದಿದ್ದವರು ಯಾರು? ಇಷ್ಟು ದಿನ ಯಾಕೆ ಮೌನವಾಗಿ ಇದ್ದರು? ಎಂದು ಪ್ರಶ್ನಿಸಿದರು.

ನಮ್ಮ ಕುಟುಂಬದಲ್ಲಿ ಅಧಿಕಾರ ದುರುಪಯೋಗ ಆಗಿದ್ದರೆ, ಅಕ್ರಮ ಆಗಿದ್ದರೆ ತನಿಖೆಗೆ ಆದೇಶ ಮಾಡಲಿ, ರಾಮಸ್ವಾಮಿ ಅವರನ್ನ ನನ್ನ ಕಾಲದಲ್ಲೆ ಸದನ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೆ.

ಅವರಿಗೆಬಹಳ ಅನುಭವ ಇದೆ ಪಾಪ, ಹಾಗಾಗಿ ಅವರ ಬಳಿಯೇ ಮಾಹಿತಿ ಇದ್ದರೆ ಮಾಹಿತಿ ಕೊಡಲು ಹೇಳಿ ಎಂದು ಕುಮಾರಸ್ವಾಮಿ ಕುಟುಕಿದರು.