ಹಾಸನ:ದಸರ ಮುಗಿಯುವುದರೊಳಗೆ ಸಿಎಂ ಬದಲಾವಣೆ ಆಗ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ವಿಜಯೇಂದ್ರಗೆ ಎಲ್ಲೋ ರಾತ್ರಿ ಹೊತ್ತು ಕನಸು ಬಿದ್ದಿರಬೇಕು ಎಂದು ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಹೊತ್ತು ಮಲಗಿರುತ್ತಾನಲ್ಲಾ ಆಗ ಕನಸು ಬಿದ್ದಿದೆ. ಅದನ್ನು ಬಂದು ವಿಜಯೇಂದ್ರ ಹೇಳಿದ್ದಾನೆ. ಕನಸುಗಳು ನಿಜ ಆಗುವುದು ಕಷ್ಟ, ಯಾವತ್ತೂ ಕನಸುಗಳು ನಿಜ ಆಗಲ್ಲ ಎಂದು ಕಟಕಿಯಾಡಿದರು.
ಕನಸು ಕನಸಾಗಿಯೇ ಉಳಿಯುವುದು ಸ್ವಾಭಾವಿಕ. ಎಲ್ಲೋ ಒಂದೊಂದು ಮುಂಜಾನೆ ನಾಲ್ಕು, ಐದು ಗಂಟೆಯಲ್ಲಿ ಬೀಳುವ ಕನಸು ನಿಜ ಆಗಬಹುದು. ಅವರಿಗೆ ಎಷ್ಟು ಗಂಟೆಯಲ್ಲಿ ಕನಸು ಬಿದ್ದಿದೆ ನನಗೆ ಗೊತ್ತಿಲ್ಲ ಎಂದರು.