ನಾಳೆಯಿಂದ ಉಂಡೆ ಕೊಬ್ಬರಿ ಖರೀದಿ ಪುನಾರಂಭ; ಬೆಲೆ ಎಷ್ಟು? ಎಲ್ಲೆಲ್ಲಿ ಖರೀದಿ? ನೋಂದಣಿ ಹೇಗೆ? ಎಷ್ಟು ದಿನ? ಇಲ್ಲಿದೆ ಮಾಹಿತಿ

ಕ್ವಿಂಟಲ್‌ ಗೆ ರೂ.12,000 ರಂತೆ ನಫೆಡ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವತಿಯಿಂದ ಖರೀದಿ

ಹಾಸನ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಪಿಎಂಸಿಗಳ ಮೂಲಕ ಉಂಡೆ ಕೊಬ್ಬರಿ ಖರೀದಿಗೆ ಸೋಮವಾರ (ಮಾ.4) ದಿಂದ ನೋಂದಣಿ ಆರಂಭವಾಗುತ್ತಿದೆ.

ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಪ್ರತಿ ಕ್ವಿಂಟಲ್‌ ಗೆ ರೂ.12,000 ರಂತೆ ನಫೆಡ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಮಾರ್ಕೆಂಟಿಂಗ್‌ ಫೆಡರೇಷನ್) ವತಿಯಿಂದ ಖರೀದಿಸಲಾಗುವುದು.

ಮಾ‌.4 ರಿಂದ ರೈತರ ನೋಂದಣಿ ಮರು ಆರಂಭವಾಗಲಿದ್ದು 45 ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ.

ರೈತರು ಮುಖ್ಯ ಮಾರುಕಟ್ಟೆ ಪ್ರಾಂಗಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಹಾಗೂ ಗಂಡಸಿ, ಬಾಣವರ, ಜಾವಗಲ್, ಜೆ. ಸಿ. ಪುರ, ಶ್ರವಣಬೆಳಗೊಳ, ನುಗ್ಗೆಹಳ್ಳಿ, ದುದ್ದ ಉಪಮಾರುಕಟ್ಟೆ ಪ್ರಾಂಗಣ ಮತ್ತು ಬಾಗೂರು, ಹಿರಿಸಾವೆ, ಉದಯಪುರ ದಲ್ಲಿ ಆರಂಭವಾಗಲಿರುವ ಖರೀದಿ ಕೇಂದ್ರಗಳಲ್ಲಿ ಪ್ರೂಟ್ಸ್‌ ಐಡಿ ಮೂಲಕ ನೊಂದಾಯಿಸಿಕೊಳ್ಳಬಹುದು.

ಪ್ರತಿ ರೈತರಿಂದ ಎಕರೆಗೆ 06 ಕ್ವಿಂಟಲ್‌ ನಂತೆ ಗರಿಷ್ಠ 15 ಕ್ವಿಂಟಲ್‌ ಉಂಡೆ ಕೊಬ್ಬರಿ ಖರೀದಿಸಲಾಗುವುದು ರೈತರ ಆಧಾರ್‌ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್‌ ಖಾತೆಗೆ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.