ಚನ್ನರಾಯಪಟ್ಟಣ: ತಾಲೂಕಿನ ಕಾಂತರಾಜಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರತ್ನಮ್ಮ ದೇವರಾಜು ಅವಿರೋಧವಾಗಿ ಆಯ್ಕೆಗೊಂಡರು.
ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕಾಂತರಾಜಪುರ ಗ್ರಾಮ ಪಂಚಾಯತಿಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಭಾಗ್ಯಮ್ಮ ರಾಮೇಗೌಡ ರವರ ರಾಜೀನಾಮೆಯಿಂದ ತೆರವುವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ದಿನ ಚುನಾವಣೆ ನಿಗದಿಯಾಗಿತ್ತು,
ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಈ ದಿನ ಶ್ರೀಮತಿ ರತ್ನಮ್ಮ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ರತ್ನಮ್ಮ ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳಾದ ಜಿ. ಆರ್. ಹರೀಶ್ ಘೋಷಣೆ ಮಾಡಿದರು.
ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಶ ರತ್ನಮ್ಮ, ಮಾತನಾಡಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಆಗಲು ಕಾರಣಕರ್ತರಾದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ಹಾಗೂ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು, ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಸಲಹೆ ಸಹಕಾರ ಪಡೆದು ಗ್ರಾಮ ಪಂಚಾಯತಿಯನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.
ರತ್ನಮ್ಮ,ಮಾಜಿ ಅಧ್ಯಕ್ಷರಾದ ಕೆ ಎನ್ ಕಾರ್ತಿಕ್, ಬರಾಳು ಮಹೇಂದ್ರ, ವಿ ಬಿ ಮಂಜುನಾಥ್, ಶರತ್ ಕುಮಾರ್, ಪ್ರಮೀಳಾ ನಾಗರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ರಾಜೇಶ ಆಚಾರ್, ಮಹೇಶ್ ಮಮತಾ ರಾಣಿ, ಚಂದ್ರಶೇಖರ್, ಶಾಂತಮ್ಮ, ಅಮೃತ ಶಿಲ್ಪ, ಕವಿತಾ ಪುರುಷೋತ್ತಮ್,,ಪಿಡಿಒ ಕೆ ಆರ್ ಸುಮನ್, ಕಾರ್ಯದರ್ಶಿ ಕಲ್ಲೇಶ್, ಪರಮ ದೇವರಾಜ ಗೌಡ, ಶ್ರೀರಂಗ, ವಿಎನ್ ರಾಜಣ್ಣ, ಪರಮಕೃಷ್ಣಣ್ಣ, ಸೇರಿದಂತೆ ಇತರರು ಹಾಜರಿದ್ದರು. ಬರಾಳು ಮಹೇಂದ್ರ,ಶರತ್ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿದರು.
ರತ್ನಮ್ಮ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿದರು. ನೂರಾರು ಜನ ಮುಖಂಡರು ಹಾಗೂ ಬೆಂಬಲಿಗರು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಜಿ ಆರ್ ಹರೀಶ್,ಪಿಡಿಒ ಕೆ ಆರ್ ಸುಮನ್, ಕಾರ್ಯದರ್ಶಿ ಕಲ್ಲೇಶ್ ಇದ್ದರು.