ಹಾಸನದ ಈ ಏರಿಯಾಗಳಲ್ಲಿ ಇವತ್ತು ಇಡೀ ದಿನ ಕರೆಂಟ್ ಇರಲ್ಲ!

ಹಾಸನ: ಸಂತೆಪೇಟೆ ಹಾಸನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ನಡೆಯಲಿದೆ. ಹೀಗಾಗಿ ಇಂದು (ಜೂ.12) ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ಯವರೆಗೆ ಹಾಸನ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.

ಸಂತೆಪೇಟೆ ಸರ್ಕಲ್, ಗಾಂಧಿಬಜಾರ್, ಶ್ರೀನಗರ, ಎನ್. ಆರ್ ವೃತ್ತ, ಹಾಸನಾಂಬ ವೃತ್ತ, ಹುಣಸಿನಕೆರೆ, ಮೈಕ್ರೋವೇವ್, ಬಿಟ್ಟಗೋಡನಹಳ್ಳಿ, ಮೆಡಿಕಲ್ ಕಾಲೇಜು, ಡಿ.ಸಿ ಕಚೇರಿ, ಎಸ್.ಪಿ ಕಚೇರಿ, ಸುವರ್ಣ, ದೇವೇಗೌಡನಗರ, ಹನುಮಂತಪುರ, ಅಗಿಲೆ, ಎರೆಬೆರೆ ಕಾವಲು, ಚನ್ನಪಟ್ಟಣ, ಹೊಸಕೊಪ್ಪಲು, ದೇವಮ್ಮ ಬಡಾವಣೆ, ಮಾರ್ಗನಹಳ್ಳಿ, ತಣ್ಣೀರುಹಳ್ಳ, ವಿಜಯನಗರ, ಬೈಲಹಳ್ಳಿ, ಹೊಯ್ಸಳ ರೆಸಾರ್ಟ್, ಕೆ.ಹೆಚ್.ಬಿ. ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು‌ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.