ಎತ್ತಿನಹೊಳೆ ಟ್ರಯಲ್ ರನ್ ವೀಕ್ಷಣೆಗೆ ಆಗಮಿಸುತ್ತಿರುವ ಡಿಸಿಎಂ: ಸುಗಂಧರಾಜ ಹೂವಿನಹಾರ ಹಾಕಬೇಡಿ ಎಂದು ಕೋರಿದ ಆಪ್ತ ಕಾರ್ಯದರ್ಶಿ

ಹಾಸನ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಮುಖಂಡರು “ಸುಗಂಧರಾಜ” ಹೂವಿನ ಹಾರವನ್ನು ಹಾಕಬಾರದು!

ಹೌದು! ಇಂತಹದ್ದೊಂದು ಅಧಿಕೃತ ಕೋರಿಕೆ ಉಪ ಮುಖ್ಯಮಂತ್ರಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಬಿ.ಎಸ್. ಶ್ರೀಧರ್ ಅವರಿಂದ ಡಿಸಿಎಂ ಪ್ರವಾಸ ಕಾರ್ಯಕ್ರಮ ಮಾಹಿತಿ ಪತ್ರದಲ್ಲಿ ಪ್ರಕಟವಾಗಿದೆ. ನಿರ್ದಿಷ್ಟವಾಗಿ ಸುಗಂಧರಾಜ ಹಾರಗಳನ್ನು ಬೇಡ ಎನ್ನಲು ಆ ಹೂವು ಡಿಸಿಎಂ ಅವರಿಗೆ ಅಲರ್ಜಿ ಉಂಟು ಮಾಡುವುದೇ ಕಾರಣ ಎನ್ನಲಾಗುತ್ತಿದೆ.

ಇಂದು ಸಕಲೇಶಪುರ ತಾಲೂಕಿನಲ್ಲಿ ಪ್ರವಾಸ ಕೈಗೊಳ್ಳಲಿರುವ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಎತ್ತಿನಹೊಳೆ ಟ್ರಯಲ್ ರನ್ ಪ್ರದೇಶಕ್ಕೆ ಭೇಟಿ ನೀಡುವರು. ಅವರ ಪ್ರವಾಸ ಕಾರ್ಯಕ್ರಮ ಹೀಗಿದೆ;

ಮಧ್ಯಾಹ್ನ :12.30: 2: ಬೆಂಗಳೂರು (ರಸ್ತೆ ಮೂಲಕ)

3.30: : ವಿಯರ್-1, ಕುಂಬರಡಿ ಕಾಫಿ ಎಸ್ಟೇಟ್, ಸಕಲೇಶಪುರ ತಾ.,

4.00: ನಿ: ವಿಯರ್-1, ಕುಂಬರಡಿ ಕಾಫಿ ಎಸ್ಟೇಟ್, ಸಕಲೇಶಪುರ ತಾ., ಹಾಸನ ಜಿಲ್ಲೆ (ರಸ್ತೆ ಮೂಲಕ)

4.30: : ವಿತರಣಾ ತೊಟ್ಟಿ-3, ದೊಡ್ಡನಾಗರ, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ

ಸಾಯಂಕಾಲ :5ಗಂಟೆ ವಿತರಣಾ ತೊಟ್ಟಿ-3; ದೊಡ್ಡನಗರ, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ, (ರಸ್ತೆ ಮೂಲಕ)

5.30ಕ್ಕೆ ವಿತರಣಾ ತೊಟ್ಟಿ-4, ಹೆಬ್ಬನಹಳ್ಳಿ, ಸಕಲೇಶಪುರ ತಾಲ್ಲೂಕು,

6 ಗಂಟೆ: ವಿತರಣಾ ತೊಟ್ಟಿ-4, ಹೆಬ್ಬನಹಳ್ಳಿ, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ (ರಸ್ತೆ ಮೂಲಕ)

ರಾತ್ರಿ 9 : ಬೆಂಗಳೂರು