ಅಯ್ಯೋ ದುರ್ವಿಧಿಯೇ..! ಕರ್ತವ್ಯದ ಮೊದಲ ದಿನವೇ ಮಸಣ ಸೇರಿದ ಐಪಿಎಸ್ ಅಧಿಕಾರಿ!

ಹಾಸನ: ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಇಂದು ಐಪಿಎಸ್ ಅಧಿಕಾರಿಯಾಗಿ ಅಧಿಕಾರ ದಂಡ ಹಿಡಿದು ಕಾರ್ಯಭಾರ ಆರಂಭಿಸಬೇಕಿದ್ದ ಯುವ ಅಧಿಕಾರಿಯೊಬ್ಬರು ವಿಧಿಯಾಟದ ಎದುರು ಶರಣಾಗಿ ಕರ್ತವ್ಯದ ಮೊದಲ ದಿನವೇ ಉಸಿರು ಚೆಲ್ಲಿದ್ದಾರೆ.

ಇಂದು ಮೈಸೂರು-ಹಾಸನ ರಸ್ತೆಯ ಕಿತ್ತಾನೆ ಬಳಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ (26) ಆಸ್ಪತ್ರೆಯಲ್ಲಿ ಮೃತಪಟ್ಟರು.

ನಿಯಂತ್ರಣ ತಪ್ಪಿದ ಜೀಪ್ ರಸ್ತೆ ಬದಿಯ ಮನೆಗೆ ಡಿಕ್ಕಿಯಾದ್ದರಿಂದ ತೀವ್ರವಾಗಿ ಪೆಟ್ಟು ಬಿದ್ದಿದ್ದ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದಕ್ಷಿಣ ವಲಯ ಐಜಿ ಡಾ.ಬೋರಲಿಂಗಯ್ಯ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಕೃತಕ ಉಸಿರಾಟದಲ್ಲಿದ್ದ ಹರ್ಷವರ್ಧನ ಅವರು ಮೃತಪಟ್ಟಿರುವ ವಿಷಯ ತಿಳಿಸಲಾಯಿತು.

ಮೂಲತಃ ಬಿಹಾರ ಮೂಲದ ಹರ್ಷವರ್ಧನ್ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದ ಐಇಟಿಯಲ್ಲಿ ಡಿಎವಿಇ ಎಂಜಿನಿಯರಿಂಗ್ ಪದವಿ ಮಾಡಿದ್ದರು. 2022-23 ರ ಐಪಿಎಸ್ ಬ್ಯಾಚ್‌ನಲ್ಲಿ ತೇರ್ಗಡೆ ಹೊಂದಿ ಕರ್ನಾಟಕ ಕೇಡರ್‌ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು.

*ಪೊಲೀಸ್ ಬೊಲೆರೋ ಟೈರ್ ಸ್ಪೋಟ; ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಐಪಿಎಸ್ ಅಧಿಕಾರಿ!*

ಪೊಲೀಸ್ ಬೊಲೆರೋ ಟೈರ್ ಸ್ಪೋಟ; ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಐಪಿಎಸ್ ಅಧಿಕಾರಿ!