ಕುಂಭಮೇಳದಲ್ಲಿ‌ ಪ್ರಧಾನಿ‌ ಮೋದಿ ಪವಿತ್ರ ಸ್ನಾನ

ಪ್ರಯಾಗ್ ರಾಜ್ ಫೆ 05: ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭೇಟಿ  ನೀಡಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.

ಅರೈಲ್ ಘಾಟ್ ನಿಂದ ಸಂಗಮ ಘಾಟ್ ಗೆ ಬೋಟ್ ನಲ್ಲಿ ತೆರಳಿ, ನಂತರ ತ್ರಿವೇಣಿ ಸಂಗಮದಲ್ಲಿ ನಿಂತು ರುದ್ರಾಕ್ಷಿ ಹಿಡಿದು ಮಂತ್ರ ಜಪಿಸುತ್ತಾ ಸ್ನಾನ ಮಾಡಿದರು. ಪ್ರಧಾನಿ ನರೇಂದ್ರ ಮೋದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು.

ಇದು ಶಾಹಿ ಸ್ನಾನ ಅಥವಾ ರಾಜಯೋಗಿ ಸ್ನಾನ ಎಂದು ಪ್ರಸಿದ್ಧಿ ಪಡೆದಿದೆ. ಕುಂಭಮೇಳದಲ್ಲಿ ಒಟ್ಟು ಆರು ಪವಿತ್ರ ಸ್ನಾನ ನಡೆಯುತ್ತವೆ. ಮಹಾಶಿವರಾತ್ರಿ ದಿನ ಕೊನೆಯ ಪವಿತ್ರ ಸ್ನಾನದೊಂದಿಗೆ ಕುಂಭಮೇಳಕ್ಕೆ ತೆರೆ ಬೀಳಲಿದೆ.