ಅಪ್ಪರೇವಣ್ಣ-ಮಗ ಪ್ರಜ್ವಲ್‌ ಇಬ್ಬರೇ ನಡೆಸಿದರು ದಿಶಾ ಮೀಟಿಂಗ್!

ದಿಶಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ತಂದೆ-ಮಗ

ಹಾಸನ: ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ
ಗುರುವಾರ ಜಿಪಂ ಹೊಯ್ಸಳ ಸಭಾಂಗಣದಲ್ಲಿ ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ವಿಶೇಷ ಎಂದರೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಹೊಳೆನರಸೀಪುರ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಬ್ಬರೇ ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು!
ಸಂಸದ ಪ್ರಜ್ವಲ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ, ಏಕೈಕ ಶಾಸಕರಾಗಿ ಹೆಚ್.ಡಿ ರೇವಣ್ಣ ಭಾಗಿಯಾಗಿದ್ದರು.
ದಿಶಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ತಂದೆ-ಮಗ ಇಲಾಖಾ ಪರಿಶೀಲನೆ ನಡೆಸಿದರು.
ಜಿಲ್ಲೆಯ ಮೂವರು ಜೆಡಿಎಸ್ ಶಾಸಕರಾದ ಸಿ.ಎನ್ ಬಾಲಕೃಷ್ಣ (ಶ್ರವಣಬೆಳಗೊಳ), ಎ.ಮಂಜು(ಅರಕಲಗೂಡು), ಹೆಚ್.ಪಿ.ಸ್ವರೂಪ್ ಪ್ರಕಾಶ್( ಹಾಸನ), ಸೇರಿದಂತೆ ಬಿಜೆಪಿ ಶಾಸಕರಾದ ಸಿಮೆಂಟ್ ಮಂಜು( ಆಲೂರು-ಸಕಲೇಶಪುರ), ಹುಲ್ಲಳ್ಳಿ ಸುರೇಶ್(ಬೇಲೂರು) ಮತ್ತು ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿAಗೇಗೌಡ( ಅರಸೀಕೆರೆ) ಇವರು ಗೈರಾಗಿದ್ದರು. ಉಳಿದಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಪಂ ಸಿಇಒ ಪೂರ್ಣಿಮಾ ಹಾಗೂ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಮುಂದುವರಿದ ಸಭೆ ನ.೨೦ ರಂದು ಮಧ್ಯಾಹ್ನ ೧೨.೧೫ಕ್ಕೆ ಹಾಗೂ ನ. ೨೧ ರಂದು ಬೆಳಗ್ಗೆ ೧೦.೪೫ ಕ್ಕೆ ನಡೆಯಲಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.