ಮೈತ್ರಿ ಅಭ್ಯರ್ಥಿ ಪರ ಪ್ರೀತಂಗೌಡ ಪ್ರಚಾರ ಮಾಡ್ತಾರೆ, ಮೈತ್ರಿ ಧರ್ಮ ಪಾಲಿಸುತ್ತೇವೆ; ಎಸ್.ಎ.ರಾಮದಾಸ್

ಎಲ್ಲರೂ ಪ್ರೀತಂ ನೇತೃತ್ವದಲ್ಲೆ ಕೆಲಸ ಮಾಡುತ್ತಾರೆ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪರ ಪ್ರೀತಂಗೌಡ ಅವರು ಖಂಡಿತಾ ಪ್ರಚಾರಕ್ಕೆ ಬರುತ್ತಾರೆ. ಹಾಸನ ಅವರಿಗೆ ತವರುಮನೆ, ಅವರ ನೇತೃತ್ವದಲ್ಲೇ ಬಾಕಿ ಎಲ್ಲರೂ ಕೆಲಸ ಮಾಡುತ್ತಾರೆ ಎಂದು ಮಾಜಿ ಸಚಿವ, ಹಳೇ ಮೈಸೂರು ಜಿಲ್ಲೆಗಳ ಬಿಜೆಪಿ ಕ್ಲಸ್ಟರ್ ಉಸ್ತುವಾರಿ ಎಸ್. ಎ.ರಾಮದಾಸ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರೀತಂಗೌಡ ಅವರನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅವರನ್ನು ಕನ್ವಿನ್ಸ್ ಕೂಡ ಮಾಡಲಾಗಿದೆ. ಅವರನ್ನು ಕೋಆರ್ಡಿನೇಟ್ ಮಾಡಲು ನಾವಿದ್ದೇವೆ. ನಿಶ್ಚಿತವಾಗಿ ಏಕಮುಖವಾಗಿ ಕಾರ್ಯ ನಡೆಯುತ್ತೆ ಎಂದರು.

ಜೆಡಿಎಸ್ ಗೆ ನೀಡಿರುವ ಮೂರು ಕ್ಷೇತ್ರಗಳಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕು ಎಂದು ಅವರು ನಮ್ಮ ಹೈಕಮಾಂಡ್ ಜತೆ ಮಾತನಾಡಿದ್ದಾರೆ. ಅವರು ಯಾರನ್ನು ನಿರ್ಣಯ ಮಾಡ್ತಾರೆ ಎನ್ನುವುದು ಅ ಅವರ ಪಕ್ಷಕ್ಕೆ, ಎನ್‌‌ಡಿಎಗೆ ಸೇರಿದ ವಿಚಾರವಾಗಿದೆ ಎಂದರು.

ಅವರು ಯಾರನ್ನೇ ಅಭ್ಯರ್ಥಿ ಮಾಡಿದರೂ ಹೊಂದಿಸಿಕೊಂಡು ಹೋಗುವುದು ನಮ್ಮ ಧರ್ಮ, ಆ ಮೈತ್ರಿ ಧರ್ಮವನ್ನು ಎಲ್ಲರೂ ಪಾಲಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಹಾಸನದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿಜೆಪಿ ಪರವಾಗಿ ಪ್ರಚಾರ ಮಾಡಿರಬಹುದು. ಆದರೆ ಈಗ ಎಲ್ಲರೂ ಒಂದಾಗಿ ಪಕ್ಷದ ನಿಲುವಿನಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.